ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ನಗರಸಭೆ ಸಾಮಾನ್ಯ ಸಭೆ: ಶಾಸಕರಿಂದ ಸ್ಮಾರ್ಟ್ ಸಿಟಿ ಯೋಜನೆ ಮಾಹಿತಿ

ಉಡುಪಿ: ನಗರಸಭೆ ಚುನಾವಣೆ ಮುಗಿದು ಸರಿ ಸುಮಾರು ಎರಡುವರೆ ವರ್ಷದ ಬಳಿಕ ಗುರುವಾರ ಪ್ರಥಮ ನಗರಸಭೆಯ ಸಾಮಾನ್ಯ ಸಭೆ ನಡೆಯಿತು.

ಸಭೆಯಲ್ಲಿ ಉಡುಪಿ ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು. ಕಸ ನಿರ್ವಹಣೆ, ಡ್ರೈನೇಜ್ ಸಮಸ್ಯೆ, ಕುಡಿಯುವ ನೀರಿನ ವಿಚಾರವಾಗಿ ಚರ್ಚೆ ನಡೆಯಿತು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಘುಪತಿ ಭಟ್ ಭಾಗವಹಿಸಿ ಪಿಪಿಪಿ ಯೋಜನೆಯಡಿ ಉಡುಪಿ ನಗರದಲ್ಲಿ ನಿರ್ಮಿಸಲಾಗುವ ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ದೇಶದ ಎರಡು ಸಿಟಿಗಳಿಗೆ ತೆರಳಿ ಈಗಾಗಲೇ ಅಲ್ಲಿ ನಿರ್ಮಾಣವಾಗಿರುವ ಸ್ಮಾರ್ಟ್ ಸಿಟಿ ಬಗ್ಗೆ ಅಧ್ಯಯನ ನಡೆಸಲಾಗಿದೆ. ಭೋಪಾಲ್ ನಲ್ಲಿ ಸ್ಮಾರ್ಟ್ ಸಿಟಿ ಪಿಪಿಪಿ ಯೋಜನೆಯಡಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಆದ್ದರಿಂದ ಉಡುಪಿ ನಗರದಲ್ಲೂ ಸ್ಮಾರ್ಟ್ ಸಿಟಿ ನಿರ್ಮಿಸಲು ಡಿಪಿಆರ್ ಸಿದ್ಧವಾಗಿದ್ದು, ಸರಕಾರಕ್ಕೆ ಸಲ್ಲಿಸಿ ಶೀಘ್ರ ಟೆಂಡರ್ ಕರೆದು ಕಾಮಗಾರಿ ನಡೆಸುವ ಬಗ್ಗೆ ಮಾಹಿತಿ ನೀಡಿದರು.

ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳ ತಂಡ "ಉಡುಪಿ, ಮಣಿಪಾಲ, ಮಲ್ಪೆ ಭಾಗ ಒಳಗೊಂಡಂತೆ ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಲು ಡಿಪಿಆರ್ ಸಿದ್ಧ ವಾಗಿದ್ದು, ಈ ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಜನರಿಗೆ ಬೇಕಾಗುವ ಎಲ್ಲ ಸೌಕರ್ಯ ತಕ್ಷಣ ಒದಗಿಸುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಒಟ್ಟು ಮೂರು ಸಾವಿರ ಲೈಟ್ ಪೋಲ್ ಅಳವಡಿಸಲಾಗುವುದು.

ಈ ಲೈಟ್ ಪೋಲ್ ಗಳು ಸಿಸಿ ಕ್ಯಾಮೆರಾ, ಅಲಾರಂ ಸಿಸ್ಟಮ್, ಎಲ್.ಇ.ಡಿ. ಪರದೆ ಸೇರಿದಂತೆ ೧೨ಕ್ಕೂ ಅಧಿಕ ಸುರಕ್ಷಾ ವಿಧಾನ ಅಳವಡಿಸಲಾಗುವುದು. ಈ ಮೂಲಕ ಉಡುಪಿಯಲ್ಲಿ ನಡೆಯುವ ಅಪರಾಧ ಪ್ರಕರಣಕ್ಕೆ ಕಡಿವಾಣ ಬೀಳಲಿದೆ. ಈ ಎಲ್ಲ ವ್ಯವಸ್ಥೆಗೆ ಸೆಕ್ಯೂರಿಟಿ ರೂಂ ವ್ಯವಸ್ಥೆ ಇರಲಿದ್ದು, ಎಲ್ಲ ಕಂಟ್ರೋಲ್ ಅಲ್ಲೇ ಇರಲಿದೆ. ಸುಸಜ್ಜಿತ ಬಸ್ ನಿಲ್ದಾಣಗಳು, ಆಟೋ ನಿಲ್ದಾಣಗಳು, ಶೌಚಾಲಯಗಳು, ಗೂಡಂಗಡಿಗಳು, ಸರಕಾರಿ ಕಟ್ಟಡಗಳಲ್ಲಿ ಕಿಯೋಸ್ಕ್ ಯಂತ್ರ ಈ ಸ್ಮಾರ್ಟ್ ಸಿಟಿ ಯೋಜನೆಯ ಭಾಗಗಳಾಗಿವೆ."

Edited By :
Kshetra Samachara

Kshetra Samachara

26/11/2020 06:30 pm

Cinque Terre

13.2 K

Cinque Terre

3

ಸಂಬಂಧಿತ ಸುದ್ದಿ