ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಲವಂತದ ಬಂದ್ ಗೆ ಮುಂದಾದರೆ ಕಲ್ಲು ಹೊಡೆದು ಓಡಿಸಿ: ರಿಷಿಕುಮಾರ ಸ್ವಾಮೀಜಿ

ಮಂಗಳೂರು: ಡಿಸೆಂಬರ್ 5 ರಂದು ಮರಾಠ ಪ್ರಾಧಿಕಾರದ ವಿರುದ್ಧ ಕನ್ನಡ ಸಂಘಟನೆಗಳು ನೀಡಿರುವ ಬಂದ್ ಕರೆಗೆ ಚಿಕ್ಕಮಗಳೂರು ಕಾಳಿಕಾ ಮಠಾಧೀಶ ಶ್ರೀ ರಿಷಿ ಕುಮಾರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಖಾಸಗಿ ಹೊಟೇಲ್ ನಲ್ಲಿ ರಾಮ್ ಸೇನಾ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡದ ಹೆಸರೇಳಿಕೊಂಡು ಪ್ರತಿದಿನ ಬಂದ್, ಬಂದ್ ಎನ್ನುತ್ತಿದ್ದಾರೆ. ಹಿಂದೂಗಳ ಅಭಿವೃದ್ಧಿ ಸಹಿಸದ ಇವರು ಬಲವಂತದ ಬಂದ್ ಗೆ ಮುಂದಾದರೆ ಕಲ್ಲು ಹೊಡೆದು ಓಡಿಸಿ ಎಂದರು.

ಇನ್ನು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಹೆಸರೆತ್ತದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಶ್ರೀಗಳು, ಪ್ರತಿಯೊಂದಕ್ಕೂ ಬಂದ್, ಬಂದ್ ಎನ್ನುತ್ತಾರಲ್ಲ? ಕರ್ನಾಟಕವನ್ನೇನು ಇವರ ಅಪ್ಪನ ಮನೆ ಆಸ್ತಿ ಅಂದುಕೊಂಡಿದ್ದಾರ? 20 ಜನ ಸೇರಿದ್ರೆ ಕರ್ನಾಟಕನಾ? ಇಲ್ಲಿ ಆರೂವರೆ ಕೋಟಿ ಜನರಿದ್ದಾರೆ. ಅವರೆಲ್ಲ ನಿಮ್ಮ ಮಾತು ಕೇಳಬೇಕೆ? ಎಂದು ಪ್ರಶ್ನಿಸಿದರು. ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡುತ್ತೇನೆ, ಇಂತವರನ್ನ ಯಾಕಾದ್ರೂ ರಾಜ್ಯದಲ್ಲಿ ಇಟ್ಟುಕೊಂಡಿದ್ದೀರ? ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ ರೀತಿ ಶೂಟ್ ಮಾಡಿ ಬಿಸಾಡಿ ಎಂದರು. ರಾಮಸೇನಾ ದ.ಕ. ಜಿಲ್ಲಾಧ್ಯಕ್ಷ ಕಿರಣ್ ಅಮೀನ್ ಉರ್ವಸ್ಟೋರ್ ಮಾತನಾಡಿ, ಡಿಸೆಂಬರ್ 5 ರಂದು ದ.ಕ. ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಬಂದ್ ನಡೆಸಲು ಬಿಡಲಾರೆವು ಎಂದರು. ಸುದ್ದಿಗೋಷ್ಠಿಯಲ್ಲಿ ರಾಮ ಸೇನಾ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

23/11/2020 05:55 pm

Cinque Terre

15.32 K

Cinque Terre

9

ಸಂಬಂಧಿತ ಸುದ್ದಿ