ಉಡುಪಿ- 2018ರ ವಿಧಾನಸಭಾ ಚುನಾವಣೆ ವೇಳೆ ಪ್ರಚೋಚನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಕಾರ್ಕಳ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿಂದ ಸಮನ್ಸ್ ನೀಡಲಾಗಿದೆ.
2018ರಲ್ಲಿ ಚುನಾವಣಾ ಭಾಷಣದ ವೇಳೆ ಸುನೀಲ್ ಕುಮಾರ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಕಾರ್ಕಳ ಪೊಲೀಸರು FIR ದಾಖಲಿಸಿದ್ದರು. ಈ ಕುರಿತಂತೆ ಅವರಿಗೆ ಈಗ ಸಮನ್ಸ್ ನೀಡಲಾಗಿದೆ. ಮತ್ತು ಡಿಸೆಂಬರ್ 10ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
Kshetra Samachara
21/11/2020 06:36 pm