ಪುತ್ತೂರು: ರೈತ ಹಿತರಕ್ಷಣಾ ವೇದಿಕೆ ಪುತ್ತೂರು ಘಟಕದಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನೋತ್ಸವ ಪುತ್ತೂರಿನ ಕಬಕ ಜಂಕ್ಷನ್ ಬಳಿ ನಡೆಯಿತು.
'ವಿಚಾರ ವಿನಿಮಯ ' ಭೂಸುಧಾರಣೆ ಕಾಯ್ದೆಯಿಂದ ಕರಾವಳಿಯಲ್ಲಾದ ಆರ್ಥಿಕ, ಸಾಮಾಜಿಕ ಬದಲಾವಣೆಯ ಈ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಉದ್ಘಾಟಿಸಿದರು.
ಪುತ್ತೂರು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹೇಮನಾಥ್ ಶೆಟ್ಟಿ ಕಾವು, ಕಾರ್ಯದರ್ಶಿ ನವೀನ್ ರೈ ಚೆಲ್ಯಡ್ಕ, ಜಿಪಂ ಸದಸ್ಯ ಎಮ್.ಎಸ್. ಮೊಹಮ್ಮದ್, ಜಿಪಂ ಸದಸ್ಯ ಅನಿತಾ ಹೇಮನಾಥ್ ಶೆಟ್ಟಿ, ಪ್ರಗತಿಪರ ಕೃಷಿಕರಾದ ರಾಜೇಶ್ ಬಾಳೆಕಲ್ಲು, ಕಿಟ್ಟಣ್ಣ ಗೌಡ ಬಪ್ಪಲಿಗೆ, ಜಿಲ್ಲಾ ಕಿಸಾನ್ ಘಟಕ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಗ್ರಾಪಂ ಸದಸ್ಯ ಸಬಾ ಕಬಕ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
19/11/2020 08:12 pm