ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ರಾಷ್ಟ್ರೀಯ, ಅಂತಾರಾಷ್ಟ್ರೀಯ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದ ವಿವಿಧ ಕ್ಷೇತ್ರಗಳಿಂದ ಪ್ರತಿನಿಧಿಸಿ ವಿಜೇತರಾದ ಹಾಗೂ ಭಾಗವಹಿಸಿದ ಒಟ್ಟು 28 ಮಂದಿ ಕ್ರೀಡಾಪಟುಗಳಿಗೆ ಒಟ್ಟು 11,80, 000 ರೂ. ಮೊತ್ತದ ಚೆಕ್ ನ್ನು ಮೇಯರ್ ದಿವಾಕರ್ ಪಾಂಡೇಶ್ವರ್ ವಿತರಿಸಿದರು.
ಉಪ ಮೇಯರ್ ವೇದಾವತಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್, ಶರತ್ ಕುಮಾರ್, ಜಗದೀಶ್ ಶೆಟ್ಟಿ ಹಾಗೂ ಇನ್ನಿತರ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.
Kshetra Samachara
19/11/2020 07:55 pm