ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: "ಯುಗಪುರುಷ" ದಲ್ಲಿ ಗೂಡುದೀಪ ಸ್ಪರ್ಧೆ ಸಮಾರೋಪ, ಬಹುಮಾನ ವಿತರಣೆ

ಮುಲ್ಕಿ: ಕಿನ್ನಿಗೋಳಿಯ "ಯುಗಪುರುಷ" ನೇತೃತ್ವದಲ್ಲಿ ಭ್ರಾಮರಿ ಮಹಿಳಾ ಸಮಾಜ ಮೆನ್ನಬೆಟ್ಟು - ಕಿನ್ನಿಗೋಳಿ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಮುಲ್ಕಿ, ಲಯನ್ಸ್ ಕ್ಲಬ್ ಎಕ್ಕಾರು - ಕಟೀಲು, ರೋಟರಿ ಕ್ಲಬ್ ಕಿನ್ನಿಗೋಳಿ, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಕಿನ್ನಿಗೋಳಿ, ಯಕ್ಷ ಲಹರಿ ಕಿನ್ನಿಗೋಳಿ, ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಮುಲ್ಕಿ ವಲಯ ಹಾಗೂ ವಿಜಯಾ ಕಲಾವಿದರು ಕಿನ್ನಿಗೋಳಿ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಭಾನುವಾರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು.

ಸಮಾರೋಪ ಹಾಗೂ ಬಹುಮಾನ ವಿತರಣೆಯ ಸಭೆಯ ಅಧ್ಯಕ್ಷತೆ ವಹಿಸಿ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಸಂಘಟನೆಗಳು ಸ್ಪರ್ಧೆಗೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಬ್ಬಾರ್, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಯಶವಂತ ಐಕಳ, ಯಕ್ಷಲಹರಿ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ, ಇನ್ನರ್ ವೀಲ್ ಅಧ್ಯಕ್ಷರಾದ ಅಂಬಿಕ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮುಲ್ಕಿ ವಲಯ ಅಧ್ಯಕ್ಷ ನವೀನ್ ಚಂದ್ರ, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರು ಅಧ್ಯಕ್ಷ ಸ್ಟ್ಯಾನಿ ಪಿಂಟೋ, ಕಾರ್ಯದರ್ಶಿ ಚಂದ್ರಶೇಖರ, ಮೆನ್ನಬೆಟ್ಟು ಭ್ರಾಮರಿ ಮಹಿಳಾ ಸಮಾಜ ಅಧ್ಯಕ್ಷೆ ರೇವತಿ, ಕಾರ್ಯದರ್ಶಿ ಅನುಷಾ, ನಿವೃತ್ತ ಉಪ ತಹಸೀಲ್ದಾರ್ ಯೋಗೀಶ್ ರಾವ್, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಭಾದ ಹರಿಪ್ರಸಾದ್, ಉದಯಕುಮಾರ್, ವೆಂಕಟೇಶ್ ಹೆಬ್ಬಾರ್, ಕೆ.ಬಿ. ಸುರೇಶ್, ಕಿನ್ನಿಗೊಳಿ ವಿಜಯ ಕಲಾವಿದರು ಅಧ್ಯಕ್ಷ ಶರತ್ ಶೆಟ್ಟಿ ಉಪಸ್ಥಿತರಿದ್ದರು.

ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜೇತರು- ಸಾಂಪ್ರದಾಯಿಕ ವಿಭಾಗ: ದಾಮೋದರ ಆಚಾರ್ಯ ಕಟೀಲು (ಪ್ರ), ನಾಗರಾಜ ಲೈಟ್ಹೌಸ್ ಹಳೆಯಂಗಡಿ (ದ್ವಿ), ಯಶವಂತ ಚೇಳಾಯರು (ತೃ); ಆಧುನಿಕ ವಿಭಾಗ: ಆದಿತ್ಯ ಭಟ್ ಕಾರ್ ಸ್ಟ್ರೀಟ್ ಮಂಗಳೂರು ( ಪ್ರ), ಅವಿನಾಶ್ ಪಡುಬಿದ್ರಿ (ದ್ವಿ), ಶಶಾಂಕ್ ಗೋಳಿಜೋರ (ತೃ) ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ಒಟ್ಟು ಇಪ್ಪತ್ತಕ್ಕೂ ಹೆಚ್ಚು ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Edited By : Manjunath H D
Kshetra Samachara

Kshetra Samachara

15/11/2020 08:03 pm

Cinque Terre

8.65 K

Cinque Terre

0

ಸಂಬಂಧಿತ ಸುದ್ದಿ