ಮಂಗಳೂರು: ಉಪಚುನಾವಣೆಯಲ್ಲಿ ಬಂಡೆ ಪುಡಿಯಾಗಿದೆ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಮಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ ಡಿಕೆಶಿ, ಬಹಳ ಸಂತೋಷ. ಬಂಡೆ ಅವರು ಉಪಯೋಗಿಸಿಕೊಳ್ಳಲಿ. ಎದೆಯಲ್ಲಿ ಚಪ್ಪಲಿ ಹಾಕಬೇಕೋ, ಜಲ್ಲಿ ಹಾಕೋಕೇ ಉಪಯೋಗಿಸಿಕೊಳ್ಳಲಿ. ಕಾಂಗ್ರೆಸ್ ಕಾರ್ಯಕರ್ತನನ್ನು ರಕ್ಷಣೆ ಮಾಡುವುದು ನನ್ನ ಕರ್ತವ್ಯ. ಯಾರು ನ್ಯಾಯ, ಅನ್ಯಾಯದಿಂದ ಇದ್ದಾರೆ ಎನ್ನುವುದು ನನಗೆ ಗೊತ್ತು. ಬಿಜೆಪಿಯವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದರು.
ಇನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆ ಫಲಿತಾಂಶದ ಬಗ್ಗೆ ನಮಗೆ ಅನುಮಾನ ಇದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬುಧವಾರ ರಾತ್ರಿ ಕೇರಳದ ಕಣ್ಣೂರಿಗೆ ತೆರಳಿದ್ದ ಡಿಕೆಶಿ ಬೆಳಿಗ್ಗೆ ಮಂಗಳೂರಿಗೆ ಆಗಮಿಸಿ ಖಾಸಗಿ ಹೊಟೇಲ್ ನಲ್ಲಿ ವಿಶ್ರಾಂತಿ ಪಡೆದರು.
ಇದೇ ವೇಳೆ ಮಾತನಾಡಿದ ಡಿಕೆಶಿ, ಉಪಚುನಾವಣೆಯ ಫಲಿತಾಂಶದ ಬಗ್ಗೆ ನಮ್ಮ ಪಕ್ಷಕ್ಕೆ ಅನುಮಾನವಿದ್ದು, ಇವಿಎಂ ಮೆಷಿನ್ ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ಕಾಂಗ್ರೆಸ್ ವಿಸ್ತೃತ ತನಿಖೆ ನಡೆಸಲಿದೆ ಎಂದರು. ಮತದಾರರು ನಾವು ಕಾಂಗ್ರೆಸ್ ಗೆ ಮತ ಚಲಾಯಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಈ ಮತಗಳು ಎಲ್ಲಿಗೆ ಹೋಯಿತು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಫಲಿತಾಂಶದ ಕುರಿತು ಸತ್ಯಾಂಶ ತಿಳಿಯಬೇಕಾಗಿದೆ
Kshetra Samachara
12/11/2020 02:38 pm