ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರ್ವ: ರಾಜ್ಯ ಸರಕಾರದಿಂದ ಬಡವರ 2 ಸಾವಿರ ಕೋಟಿ ಹಣ ಲೂಟಿ; ಐವನ್ ಡಿಸೋಜ

ಶಿರ್ವ : ಕೊರೊನಾ ಸಂಕಷ್ಟದ ಸಮಯದಲ್ಲಿ ರಾಜ್ಯ ಸರಕಾರ ಬಡವರ ಎರಡು ಸಾವಿರ ಕೋಟಿ ಹಣ ಲೂಟಿ ಮಾಡುವ ಮೂಲಕ ರಾಜ್ಯದ ಜನತೆಗೆ ಮತ್ತು ಅನಾರೋಗ್ಯ ಪೀಡಿತ ಬಡವರಿಗೆ ಮೋಸ ಮಾಡಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.

ಸೋಮವಾರ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರಕಾರದ ಆಡಳಿತ ವೈಫಲ್ಯ ಹಾಗೂ ಜನವಿರೋಧಿ ಧೋರಣೆ ಖಂಡಿಸಿ ಶಿರ್ವ ಪೇಟೆಯಲ್ಲಿ ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು.

ಒಂದು ವೇಳೆ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗದಿದ್ದಲ್ಲಿ ತನಿಖೆಗೆ ಆದೇಶ ನೀಡಲಿ ಎಂದು ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದರು.

ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಬಿಜೆಪಿ ಸರಕಾರ ಬ್ರಿಟಿಷ್ ತಂತ್ರದ ಮುಂದುವರಿಕೆ ಮೂಲಕ ಆಳ್ವಿಕೆಗೆ ಬಂದ ಕಾರಣ ಅವರಿಗೆ ಜನರ ಸಮಸ್ಯೆ ಚರ್ಚೆ ಮಾಡಲು ಸಮಯವಿಲ್ಲ ಎಂದರು. ಪ್ರತಿಭಟನೆ ಸಭೆಗೆ ಮುನ್ನ ಮೋನಿಶ್ ಕಾಂಪ್ಲೆಕ್ಸ್ ಬಳಿಯಿಂದ ಶಿರ್ವ ಪೇಟೆ ವರೆಗೆ ಜಾಥಾ ನಡೆಯಿತು.

ಮಾಜಿ ಸಚಿವ ವಿನಯಕುಮಾರ್ ಸೊರಕೆ,ಗೀತಾ ವಾಗ್ಲೆ,ಜ್ಯೋತಿ ಹೆಬ್ಬಾರ್,ನವೀನ್ ಚಂದ್ರ ಜೆ. ಶೆಟ್ಟಿ, ಶಿವಾಜಿ ಸುವರ್ಣ, ವಿಲ್ಸನ್ ರೋಡ್ರಿಗಸ್,ಅಖಿಲೇಶ್ ಹಾಗೂ ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

11/11/2020 09:36 pm

Cinque Terre

7.83 K

Cinque Terre

4

ಸಂಬಂಧಿತ ಸುದ್ದಿ