ಉಡುಪಿ: ಕೇಂದ್ರ ಸರಕಾರದ ಜನ ವಿರೋಧಿ, ಖಾಸಗೀಕರಣ ನೀತಿ ವಿರುದ್ಧ ಸಂವಿಧಾನ ದಿನವಾದ ನವೆಂಬರ್ 26 ರಂದು ದಲಿತ ಸಂಘರ್ಷ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ದೇಶಾದ್ಯಂತ ಬಂದ್ ಆಚರಿಸಲು ಕರೆ ನೀಡಿವೆ.
ಈ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾಕ್ಟರ್ ಆರ್.ಮೋಹನ್ರಾಜ್ , ರಾಜ್ಯ ಮತ್ತು ಕೇಂದ್ರ ಸರಕಾರಗಳು 1949 ರಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಈ ದೇಶದ ಸಂವಿಧಾನದ ಕರಡು ಪ್ರತಿ ಸಲ್ಲಿಸಿದ ದಿನ.
ಇಂದು ಕೇಂದ್ರ ಮತ್ತು ರಾಜ್ಯ ಸರಕಾರ ಭೂ ಸುಧಾರಣಾ ಕಾಯಿದೆ, ಜನವಿರೋಧಿ ಕಾಯಿದೆಗಳ ಮೂಲಕ ಹಾಗೂ ಯುಎಪಿಎ, ರಾಷ್ಟ್ರೀಯ ತನಿಖಾ ದಳದ ಹೆಸರಿನಲ್ಲಿ ದೇಶದ ಬುದ್ಧಿಜೀವಿಗಳು, ವಿದ್ಯಾವಂತರನ್ನು ಬಂಧಿಸುತ್ತಿದ್ದಾರೆ. ಆಲೋಚನಾ ಶಕ್ತಿಯೇ ದೇಶದ್ರೋಹದ ಕೆಲಸ ಎಂಬಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಭಾವಿಸಿವೆ. ಇವುಗಳನ್ನು ಖಂಡಿಸಿ ದೇಶಾದ್ಯಂತ ನವೆಂಬರ್ 26 ರಂದು ರಾಷ್ಟ್ರೀಯ ಸಾರ್ವತ್ರಿಕ ಬಂದ್ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಂಚಾಲಕ ರಾಜು ತಳವಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎ.ಹೋಬಳೇಶ್, ಜಿಲ್ಲಾ ಸಂಚಾಲಕ ಭರತ್, ರಾಜ್ಯ ಸಮಿತಿ ಸದಸ್ಯ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
09/11/2020 09:48 pm