ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಏರ್ ಪೋರ್ಟ್ ಖಾಸಗೀಕರಣದಿಂದ ಜನರಿಗೆ ಅವಮಾನ; ರಮಾನಾಥ ರೈ ಸಿಡಿಮಿಡಿ

ಮಂಗಳೂರು: ಅಮೆರಿಕದಲ್ಲಾದ ಬದಲಾವಣೆ ನಮ್ಮ ದೇಶದಲ್ಲೂ ಆಗಬೇಕು. ಕೇಂದ್ರದಲ್ಲಿರುವ ಎನ್ ಡಿಎ ಸರ್ಕಾರ ಸರ್ವಾಧಿಕಾರಿ ಧೋರಣೆ ಮೂಲಕ ಜನರಿಗೆ ಅನ್ಯಾಯ ಮಾಡ್ತಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಕಿಡಿಕಾರಿದ್ದಾರೆ. ಮಂಗಳೂರಿನ ಬಜ್ಪೆಯಲ್ಲಿ ಏರ್ ಪೋರ್ಟ್ ಖಾಸಗೀಕರಣ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಮಂಗಳೂರು ಏರ್ ಪೋರ್ಟ್ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ವಿಮಾನ ನಿಲ್ದಾಣ. ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬಂದಿತ್ತು. ಬಜ್ಪೆಯಲ್ಲಿ ವಿಮಾನ ನಿಲ್ದಾಣ ಮಾಡುವುದಕ್ಕೆ ಶ್ರೀನಿವಾಸ ಮಲ್ಯರು ಬಹಳ ಶ್ರಮ ವಹಿಸಿದ್ದರು. ಅದಕ್ಕೆ ಜವಾಹರಲಾಲ್ ನೆಹರೂ ಅವರ ಸಂಪೂರ್ಣ ಬೆಂಬಲ ಇತ್ತು. ಶ್ರೀನಿವಾಸ ಮಲ್ಯ, ನೆಹರೂ ಅವರ ಸಹಕಾರದಿಂದ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬಂದಿತ್ತು.

ಇದೀಗ ವಿಮಾನ ನಿಲ್ದಾಣವನ್ನು ಮಾರಾಟ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವ್ರು,ನೆಹರೂ ಮೈದಾನವನ್ನು ಕೇಂದ್ರ ಮೈದಾನ ಎಂದು ಕರೆಯಲಾಗುತ್ತಿದೆ. ನೆಹರೂ ಅವರ ಹೆಸರನ್ನು ಒಂದು ಪಕ್ಷದವರಿಗೆ ಹೇಳೋಕೆ ಆಗ್ತಿಲ್ಲ. ಇದು ಜವಾಹರಲಾಲ್ ನೆಹರೂ ಅವರಿಗೆ ಮಾಡಿದ ಅಪಮಾನ ಎಂದ ಅವರು, ಖಾಸಗೀಕರಣ ಮೂಲಕ ದಕ್ಷಿಣ ಕನ್ನಡದ ಜನರಿಗೆ ಅಪಮಾನ ಮಾಡಲಾಗಿದೆ. ಇದನ್ನು ಯಾರು ಕೂಡ ಸಹಿಸೋಕೆ ಸಾಧ್ಯವಿಲ್ಲ. ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಇವರು ಅಪಮಾನ ಮಾಡುತ್ತಿದ್ದಾರೆ. ಹೀಗಾಗಿ ನಾವು ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಿದ್ದನ್ನು ಖಂಡಿಸುತ್ತೇವೆ ಎಂದರು.

Edited By : Manjunath H D
Kshetra Samachara

Kshetra Samachara

09/11/2020 05:27 pm

Cinque Terre

13.1 K

Cinque Terre

5

ಸಂಬಂಧಿತ ಸುದ್ದಿ