ಮಂಗಳೂರು: ರಾಷ್ಟ್ರೀಯ ಸುದ್ದಿವಾಹಿನಿ ಪ್ರಧಾನ ಸಂಪಾದಕ, ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಲಾಲ್ ಬಾಗ್ ಜಂಕ್ಷನ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನ ಉದ್ದೇಶಿಸಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ(ಎಬಿವಿಪಿ)ದ ಕಾರ್ಯದರ್ಶಿ ಆದಿತ್ಯ ಮಾತನಾಡಿ, "ಅರ್ನಬ್ ಗೋಸ್ವಾಮಿ ಓರ್ವ ನಿಷ್ಠಾವಂತ ಪತ್ರಕರ್ತ. ಅವರ ಅಕ್ರಮ ಬಂಧನ ಅನ್ನೋದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಧ್ಯಮವನ್ನ ಯಾವ ರೀತಿ ಬಗ್ಗು ಬಡಿಯಲಾಗಿತ್ತೋ ಅದೇ ಧೋರಣೆಯನ್ನ ಕಾಂಗ್ರೆಸ್ ಈಗಲೂ ಹೊಂದಿದೆ" ಎಂದು ಆರೋಪಿಸಿದರು. ಅಲ್ಲದೇ ತಕ್ಷಣ ಅರ್ನಬ್ ಅವರನ್ನ ಬೇಷರತ್ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಜಂಟಿ ಕಾರ್ಯದರ್ಶಿ ನಿಶಾನ್ ಆಳ್ವ, ನಗರ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು, ಅಕ್ಷಯ್ ಕಾಮತ್ ಮತ್ತಿತ್ತರರು ಉಪಸ್ಥಿತರಿದ್ದರು.
Kshetra Samachara
06/11/2020 11:33 am