ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಸೈನಿಕರ ಬಗ್ಗೆ ಅನುಮಾನಪಟ್ಟ ಕಾಂಗ್ರೆಸ್ಸಿಗರು ತಾಯಿಯನ್ನು ನಂಬಲು ಸಾಧ್ಯವೇ?"

ಮಂಗಳೂರು: ಸೈನಿಕರ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ಪಡುವ ಕಾಂಗ್ರೆಸ್ಸಿಗರು ತಾಯಿಯನ್ನು ನಂಬಲು ಸಾಧ್ಯವೇ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಪ್ರತಿಯೊಂದರಲ್ಲೂ ಅನುಮಾನ ಇದ್ದಿದ್ದೇ.

ಅವರು ಅನುಮಾನ ಪಡದ ವಿಚಾರಗಳೇ ಇಲ್ಲ. ಚುನಾವಣೆಯಲ್ಲಿ ಸೋತರೆ ಇವಿಎಂ ಬಗ್ಗೆ ಅನುಮಾನ ಪಡ್ತಾರೆ. ಆದರೆ, ಅವರೇನಾದರೂ ಗೆದ್ದಲ್ಲಿ ಅದನ್ನು ಜನಾದೇಶ ಅಂತಾ ಸಮರ್ಥಿಸುತ್ತಾರೆ‌.

ಸಿಬಿಐ, ನ್ಯಾಯಾಲಯದ ಮೇಲೂ ಇವರಿಗೆ ಅನುಮಾನ ಹೊರತಾಗಿಲ್ಲ. ಕೊನೆಪಕ್ಷ ಸೈನಿಕರ ಸರ್ಜಿಕಲ್ ಸ್ಟ್ರೈಕ್ ಗಾದರೂ ಹೆಮ್ಮೆಪಡಬೇಕಿತ್ತು. ಆದರೆ, ಕಾಂಗ್ರೆಸ್ ಅಲ್ಲೂ ಅನುಮಾನಪಟ್ಟಿದೆ. ತಾಯಿಯನ್ನೇ ನಂಬದವರು ಮಾತ್ರ ಸೈನ್ಯದ ಬಗ್ಗೆ ಅನುಮಾನಪಡುತ್ತಾರೆ ಎಂದು ಸಿ.ಟಿ. ರವಿ ಕಿಡಿಕಾರಿದರು.

Edited By : Manjunath H D
Kshetra Samachara

Kshetra Samachara

05/11/2020 07:21 pm

Cinque Terre

17.34 K

Cinque Terre

3

ಸಂಬಂಧಿತ ಸುದ್ದಿ