ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಇಂದು ದಿನವಿಡೀ ಬಿಜೆಪಿ ಕಾರ್ಯಕಾರಿಣಿ ಸಭೆ, ನಗರಾದ್ಯಂತ ಕೇಸರಿ ಹವಾ...

ವರದಿ: ಇರ್ಷಾದ್ ಕಿನ್ನಿಗೋಳಿ, ಪಬ್ಲಿಕ್ ನೆಕ್ಸ್ಟ್, ಮಂಗಳೂರು

ಮಂಗಳೂರು: ಸಂಪೂರ್ಣ ಕೇಸರಿಮಯವಾಗಿರುವ ಮಂಗಳೂರು ನಗರದಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ.

ಸಭೆ ಹಿನ್ನೆಲೆಯಲ್ಲಿ ಈಗಾಗಲೇ ಸಿಎಂ ಬಿ.ಎಸ್. ಯಡಿಯೂರಪ್ಪ ಸಹಿತ ಹಲವು ಘಟಾನುಘಟಿ ಕಮಲ ನಾಯಕರು ನಗರಕ್ಕೆ ಆಗಮಿಸಿ ಹೊಟೇಲ್, ಪ್ರವಾಸಿ ಮಂದಿರಗಳಲ್ಲಿ ತಂಗಿದ್ದಾರೆ. ಬೆಳಿಗ್ಗೆ 10ಕ್ಕೆ ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಆರಂಭವಾಗಲಿದೆ.

ಸಭೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಈ ಕಾರ್ಯಕಾರಿಣಿ ಸಭೆಯಲ್ಲಿ ಸುಮಾರು 120 ಮಂದಿ ಭಾಗವಹಿಸಲಿದ್ದು, ಆಹ್ವಾನಿತ ಜನಪ್ರತಿನಿಧಿಗಳಲ್ಲದೆ, ಉಳಿದಂತೆ ಯಾರಿಗೂ ಒಳಗೆ ತೆರಳಲು ಅವಕಾಶವಿಲ್ಲ.

ಇನ್ನು, ಸಭಾಂಗಣದ 100 ಮೀಟರ್ ಅಂತರದಲ್ಲಿರುವ ಓಶಿಯನ್ ಪರ್ಲ್ ಹೊಟೇಲ್ ನಲ್ಲಿ ಇದೇ ಸಮಯದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯೂ ನಡೆಯಲಿದೆ. ಈ ಸಭೆಯಲ್ಲಿ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಗೂ ಕಡಲನಗರಿ ಮಂಗಳೂರು ಸಜ್ಜಾಗಿದೆ. ಕೊಡಿಯಾಲ್ ಬೈಲ್ ಬಳಿ ಇರುವ ನವಭಾರತ್ ಸರ್ಕಲ್, ಪಿವಿಎಸ್ ಸರ್ಕಲ್ ಪರಿಸರದಲ್ಲಿ ಕೇಸರಿ ಕಲರವ ಎದ್ದು ಕಾಣುತ್ತಿದೆ. ಲೇಸರ್ ಬೆಳಕಿನ ಮೂಲಕ ಕಮಲ ಚಿಹ್ನೆಯನ್ನು ಬೃಹದಾಕಾರದಲ್ಲಿ ಸೆರೆ ಹಿಡಿದು, ಓಶಿಯನ್ ಪರ್ಲ್ ಹೊಟೇಲ್ ಮೇಲೆ ಹರಿಯಬಿಟ್ಟಿದ್ದು, ಜನರ ಆಕರ್ಷಣೆಗೆ ಕಾರಣವಾಗಿದೆ‌. ಸಭೆ ನಡೆಯುವ ಸುತ್ತಮುತ್ತ ಭಾರಿ ವೆಚ್ಚದಲ್ಲಿ ಲೈಟಿಂಗ್ಸ್ ನಡೆಸಿ ನಗರಕ್ಕೆ ಆಗಮಿಸುವ ನಾಯಕರನ್ನು ವಿಶೇಷವಾಗಿ ಬರಮಾಡಿಕೊಳ್ಳಲಾಗಿದೆ.‌

Edited By : Nagesh Gaonkar
Kshetra Samachara

Kshetra Samachara

05/11/2020 07:29 am

Cinque Terre

25.62 K

Cinque Terre

3

ಸಂಬಂಧಿತ ಸುದ್ದಿ