ಕಾರ್ಕಳ: ಕೃಷಿ ,ಹೈನುಗಾರಿಕೆ, ವಾಣಿಜ್ಯ ಬೆಳೆಗಳು ಸಮರ್ಪಕ ಮಾರುಕಟ್ಟೆ, ಸೂಕ್ತ ಬೆಂಬಲ ಬೆಲೆ, ದುಬಾರಿಯಾದ ಮೇವು, ದುಬಾರಿ ಗೊಬ್ಬರ, ಕೃಷಿ ಕಾರ್ಮಿಕರ ಕೊರತೆಯಿಂದ ಅವನತಿಯತ್ತ ಸಾಗುತ್ತಿದೆ. ಇದಕ್ಕೆ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ನೇರ ಹೊಣೆ ಎಂದು ಕ್ರಷಿಕ,ಸಮಾಜ ಸೇವಕ ಕಿರಣ್ ಹೆಗ್ಡೆ ಆರೋಪಿಸಿದರು.
ಅವರು ಕಾರ್ಕಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.ಕೃಷಿಕರು ಬೆಳೆದ ಬೆಳೆಗಳನ್ನು ಖರೀದಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಸರಿಯಾಗಿಲ್ಲ ,ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸಭಾಭವನಗಳನ್ನು ಕಟ್ಟುವ ಬದಲು ಕೃಷಿಕರಿಗೆ ಸೂಕ್ತ ಬೆಂಬಲ ಬೆಲೆಯನ್ನು ನೀಡಲು ಸರಕಾರ ಮುಂದಾಗಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಬಡ ಮತ್ತು ಸಣ್ಣ ರೈತರು ಬೆಳೆಗಳನ್ನು ತರಲು ತೀರಾ ತೊಂದರೆಯಾಗುತ್ತದೆ. ವಾಹನದ ವ್ಯವಸ್ಥೆ ಇಲ್ಲದೆ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆ ಸಂಕೀರ್ಣ ಕ್ಕೆ ಒಯ್ಯಲು ಅನುಕೂಲವಾಗುವಂತೆ ಗ್ರಾಮ ಮಟ್ಟದಲ್ಲಿ ಮಾರುಕಟ್ಟೆಗಳನ್ನು ನಿರ್ಮಾಣ ಮಾಡುವ ಮೂಲಕ ರೈತರ ಬೆಳೆಗಳನ್ನು ಹೆಚ್ಚಿನ ಬೆಲೆ ನಿಗದಿ ಮಾಡಿ ಖರೀದಿಸುವಂತಾಗಬೇಕು.
ಸಣ್ಣ ಸಣ್ಣ ರೈತರು ತಾವು ಬೆಳೆದ ಬೆಳೆಗಳನ್ನು ತಾವೇ ಮಾರುಕಟ್ಟೆ ಗಳಲ್ಲಿ ಯಾವುದೇ ಮಧ್ಯವರ್ತಿ ಗಳ ತೊಂದರೆಯಿಲ್ಲದೆ ಮಾರಾಟ ಮಾಡುವಂತಾಗಬೇಕು ಎಂದರು.
Kshetra Samachara
01/01/2022 11:29 am