ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಚಿವ ಸುನಿಲ್ ಕುಮಾರ್ ರಿಂದ ಬ್ರಹ್ಮಾವರ ಕೃಷಿ ಮಹೋತ್ಸವ - 2021 ಕಾರ್ಯಕ್ರಮಕ್ಕೆ ಚಾಲನೆ

ಬ್ರಹ್ಮಾವರ: ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ. ಸುನೀಲ್ ಕುಮಾರ್ ಅವರಿಂದು ಬ್ರಹ್ಮಾವರದಲ್ಲಿ ಕೃಷಿ ಮಹೋತ್ಸವ - 2021 ಉದ್ಘಾಟಿಸಿದರು. ಭತ್ತದ ಯಾಂತ್ರೀಕರಣದಲ್ಲಿ ಸಾಧನೆ ಮಾಡಿದ ಭರತ್ ಕುಮಾರ್ ಶೆಟ್ಟಿ ಗಿಳಿಯಾರು, ಬಿ ಸೀತಾರಾಮ ಶೆಟ್ಟಿ ಬಾರ್ಕೂರು, ಶ್ರೀರಾಮ ಗೊಲ್ಲ ಬಿರ್ತಿ ಬ್ರಹ್ಮಾವರ, ಗುಲಾಬಿ ನಾಯರ್ತಿ ಅಗ್ರಹಾರ ಚಾಂತಾರು ಇವರನ್ನು ಸಚಿವರು ಈ ಸಂದರ್ಭ ಗೌರವಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್ ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ರಾಜಶೇಖರಮೂರ್ತಿ ತಹಸಿಲ್ದಾರ್ ಬ್ರಹ್ಮಾವರ, ಎಚ್. ಕೆಂಪೇಗೌಡ ಜಂಟಿ ಕೃಷಿ ನಿರ್ದೇಶಕರು ಉಡುಪಿ, ಸೀತಾ ಎಂ. ಸಿ. ಜಂಟಿ ಕೃಷಿ ನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲೆ, ಭುವನೇಶ್ವರಿ, ಉಪನಿರ್ದೇಶಕರು ತೋಟಗಾರಿಕೆ ಇಲಾಖೆ, ಉಡುಪಿ, ಹೆಚ್. ಆರ್. ನಾಯ್ಕ್, ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಡಾ. ಶಂಕರ್ ಶೆಟ್ಟಿ ಉಪನಿರ್ದೇಶಕರು ಪಶುಸಂಗೋಪನೆ ಇಲಾಖೆ ಉಡುಪಿ, ಅಶೋಕ್ ಕುಮಾರ್ ಕೊಡ್ಗಿ, ಅಧ್ಯಕ್ಷರು ಜಿಲ್ಲಾ ಕೃಷಿಕ ಸಮಾಜ ಉಡುಪಿ, ಎಸ್. ಡಿ. ಸಂಪತ್ ಸಾಮ್ರಾಜ್ಯ, ಅಧ್ಯಕ್ಷರು ಜಿಲ್ಲಾ ಕೃಷಿಕ ಸಮಾಜ ದಕ್ಷಿಣ ಕನ್ನಡ ಜಿಲ್ಲೆ, ದಿನೇಶ್ ಶೇರಿಗಾರ್, ಯೋಜನಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ), ಬ್ರಹ್ಮಾವರ, ಡಾ. ಲಕ್ಷ್ಮಣ, ಸಹ ಸಂಶೋಧನಾ ನಿರ್ದೇಶಕರು, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

08/10/2021 06:33 pm

Cinque Terre

4.14 K

Cinque Terre

0