ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ನೀರುಪಾಲಾದ ಬಾಲಕಿ ಶೋಧ ಕಾರ್ಯ; ಮನೆಗೆ ಶಾಸಕ‌ ಸುಕುಮಾರ್ ಶೆಟ್ಟಿ ಭೇಟಿ, ಸಾಂತ್ವನ

ಬೈಂದೂರು: ತಾಲೂಕಿನ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಕಾಲುಸಂಕ ದಾಟುವಾಗ ನೀರುಪಾಲಾದ ಏಳು ವರ್ಷದ ಬಾಲಕಿಯ ಶೋಧಕಾರ್ಯ ಮುಂದುವರೆದಿದೆ.

ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಎರಡನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಇಂದು ಶಾಲೆಯಿಂದ ಮನೆಗೆ ಬರುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಳು. ನತದೃಷ್ಟ ಬಾಲಕಿ ಸನ್ನಿಧಿ, ಬೊಳಂಬಳ್ಳಿಯ ಮಕ್ಕಿಮನೆ ಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿಯಾಗಿದ್ದಾಳೆ. ಇದೀಗ ಬಾಲಕಿ ಮನೆಗೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಭೇಟಿ ಕೊಟ್ಟು ಸಾಂತ್ವನ‌ ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ತಹಶೀಲ್ದಾರ್ ಕಿರಣ್ ಗೋರಯ್ಯ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ರಕ್ಷಣಾ ಕಾರ್ಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

08/08/2022 07:51 pm

Cinque Terre

19.19 K

Cinque Terre

1

ಸಂಬಂಧಿತ ಸುದ್ದಿ