ಮುಲ್ಕಿ: ಮುಲ್ಕಿ ಹೋಬಳಿಯ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣ ವಿತರಣೆ ಮುಲ್ಕಿ ನ.ಪಂ. ಬಳಿ ನಡೆಯಿತು. ಅಧ್ಯಕ್ಷತೆಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ವಹಿಸಿ ಮಾತನಾಡಿ, ಸರಕಾರವು ಕೃಷಿಕರಿಗೆ ಉತ್ತೇಜನ ನೀಡುವುದರ ಜೊತೆಗೆ ಫಲಾನುಭವಿಗಳನ್ನು ಗುರುತಿಸುವುದರ ಮೂಲಕ ಕೃಷಿಗೆ ಮತ್ತಷ್ಟು ಪ್ರೋತ್ಸಾಹ ನೀಡಲಾಗುವುದು. ಕೊರೊನಾ ದಿನಗಳಲ್ಲಿ ಯುವ ಜನಾಂಗ ಕೃಷಿಯತ್ತ ಒಲವು ತೋರಿಸುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ-ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ಜಿಪಂ ಸದಸ್ಯರಾದ ವಿನೋದ್ ಬೊಳ್ಳೂರು, ಮುಲ್ಕಿ ನ.ಪಂ. ಸದಸ್ಯರು, ಮುಲ್ಕಿ ವಿಶೇಷ ತಹಶೀಲ್ದಾರ್ ಮಾಣಿಕ್ಯ ಎನ್., ಮುಲ್ಕಿ ನ.ಪಂ. ಮುಖ್ಯಾಧಿಕಾರಿ ಚಂದ್ರ ಪೂಜಾರಿ,ಮಂಗಳೂರು ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ.ಆರ್., ಮುಲ್ಕಿ ಕೃಷಿ ಅಧಿಕಾರಿ ಅಬ್ದುಲ್ ಬಶೀರ್, ಆತ್ಮ ಯೋಜನೆ ತಾಂತ್ರಿಕ ವ್ಯವಸ್ಥಾಪಕ ಷಣ್ಮುಖ ಉಪಸ್ಥಿತರಿದ್ದರು. ಈ ಸಂದರ್ಭ ಫಲಾನುಭವಿಗಳಾದ ಪುರುಷೋತ್ತಮ್ ಕೋಟ್ಯಾನ್ ನಡುಗೊಡು, ಶೇಖರ್ ಶೆಟ್ಟಿ ಶಿಮಂತೂರು, ಲಕ್ಷಣ ಅಂಚನ್ ಕವತ್ತಾರು, ಮೋಹನ್ ಮಾನಂಪಾಡಿ ಅವರಿಗೆ ಪವರ್ ವೀಡರ್ ಟಿಲ್ಲರ್, ಬ್ರಷ್ ಕಟ್ಟರ್, ಪವರ್ ವೀಡರ್ ಯಂತ್ರೋಪಕರಣ ವಿತರಿಸಲಾಯಿತು.
Kshetra Samachara
04/11/2020 07:48 pm