ಕಾಪು: ಎಸ್ಡಿಪಿಐ ಉಚ್ಚಿಲ ಗ್ರಾಮ ಸಮಿತಿ ವತಿಯಿಂದ ಮುಂಬರುವ ಬಡಾ ಗ್ರಾ ಪಂ ಚುನಾವಣೆಗೆ ಎಸ್ಡಿಪಿಐ ಪಕ್ಷದ ಅಭ್ಯರ್ಥಿಗಳ ಮೊದಲ ಹಂತದ ಘೋಷಣಾ ಕಾರ್ಯಕ್ರಮ ಉಚ್ಚಿಲ ಭಾಸ್ಕರ ನಗರದಲ್ಲಿರುವ ಪಕ್ಷದ ಕಚೇರಿ ಮುಂಭಾಗದಲ್ಲಿ ಮಂಗಳವಾರ ನಡೆಯಿತು.
ಅಧ್ಯಕ್ಷತೆಯನ್ನು ಎಸ್ಡಿಪಿಐ ಪಂಚಾಯತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಝಾಕ್ ವೈ.ಎಸ್. ವಹಿಸಿದ್ದರು. ಎಸ್ಡಿಪಿಐ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಮಜೀದ್ ಪೊಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಾಚರ್ ಮಾತನಾಡಿ, ಹತ್ತು ವರ್ಷ ತುಂಬಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಂಬ ಪಕ್ಷ ಇವತ್ತು ದೇಶದಲ್ಲಿ ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಡುವ ಪಕ್ಷಗಳ ನಿದ್ರೆಗೆಡಿಸಿದೆ.
ಇಲ್ಲಿರುವ ಸ್ವಯಂ ಘೋಷಿತ ಜಾತ್ಯತೀತ ರಾಜಕೀಯ ಪಕ್ಷಗಳ ಸುಳ್ಳು ಪೊಳ್ಳು ಭರವಸೆಗಳನ್ನು ಎಸ್ಡಿಪಿಐ ಜನರ ಮುಂದಿಡುತ್ತಿವೆ. ಇದರಿಂದಾಗಿ ಇಂತಹ ಪಕ್ಷಗಳು ಎಸ್ಡಿಪಿಐ ಪಕ್ಷವನ್ನು ಕಂಡು ಭಯ ಪಡುತ್ತಿದೆ ಎಂದರು. ಎಸ್ಡಿಪಿಐ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಸಾಸ್ತಾನ ಅಭ್ಯರ್ಥಿಗಳ ಘೋಷಣೆ ಮಾಡಿದರು.
ಬಡಾ ಗ್ರಾಮದ ಅಭ್ಯರ್ಥಿ ಘೋಷಣೆ ವಿವರ: 1. ಮಜೀದ್ ಪೊಲ್ಯ , 2.ಕಲೀಲ್ ಉಮ್ಮರ್,3. ಶರೀಫ್ ಕರೀಂ, 4 ಆಸೀಫ್ ವೈ.ಸಿ., 5 ಅಬ್ರಾರ್ ಉಚ್ಚಿಲ, 6. ರುಮಾನಾ ನೂರ್, 7. ನಾಝಿಯಾ ಮಜೀದ್ ಇವರನ್ನು
ಅಭ್ಯರ್ಥಿಗಳಾಗಿ ಘೋಷಿಸಲಾಯಿತು.
ಎಸ್ಡಿಪಿಐ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ರಹಮಾನ್ ಮಲ್ಪೆ, ಪಿಎಫ್ಐ ಉಚ್ಚಿಲ ಡಿವಿಜನ್ ಅಧ್ಯಕ್ಷ ಸಿದ್ದೀಕ್ ಕನ್ನಂಗಾರ್,ಎಸ್ಡಿಪಿಐ ಪಂಚಾಯತ್ ಕಮಿಟಿ ಸದಸ್ಯ ಇಬ್ರಾಹಿಂ ಅರ್ಶ್, ಪಿಎಫ್ಐ ಕಾಪು ಡಿವಿಜನ್ ಅಧ್ಯಕ್ಷ ಸಾದಿಕ್ ಕೆ.ಪಿ. ಉಪಸ್ಥಿತರಿದ್ದರು. ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಹನೀಫ್ ಮುಳೂರು ಸ್ವಾಗತಿಸಿ, ವಂದಿಸಿದರು.
Kshetra Samachara
03/11/2020 07:52 pm