ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಲ್ಲಡ್ಕ ಭಟ್ ರಿಗೆ ವಯಸ್ಸಾಗಿದೆ: ಯುಟಿ ಖಾದರ್ ವ್ಯಂಗ್ಯ

ಮಂಗಳೂರು: ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಇದ್ದಂತೆ ಎಂಬ ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಗೆ ಮಂಗಳೂರಿನಲ್ಲಿ ಮಾಜಿ ಸಚಿವ, ಶಾಸಕ ಯು ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಅತ್ಯಂತ ದುರದೃಷ್ಟಕರ ಹೇಳಿಕೆ. ಸಾರ್ವಜನಿಕ ಹೇಳಿಕೆ ಎಲ್ಲದಕ್ಕೂ ಪೂರಕವಾಗಿರಬೇಕು. ಪ್ರಭಾಕರ ಭಟ್ ಅವರ ಹೇಳಿಕೆ ಎಲ್ಲರಿಗೂ ನೋವು ಉಂಟುಮಾಡಿದೆ. ಉಳ್ಳಾಲ ಅನ್ನೋದು ಬಹುಸಂಸ್ಕೃತಿಯ ಒಂದು ಪ್ರದೇಶ. ಅಬ್ಬಕ್ಕರ ಇತಿಹಾಸ, ದೇಗುಲ, ಮಸೀದಿ, ಚರ್ಚ್ ಎಲ್ಲವೂ ಉಳ್ಳಾಲದಲ್ಲಿದೆ. ಉಳ್ಳಾಲ ಪ್ರದೇಶದಲ್ಲಿ ಎಲ್ಲಾ ಧರ್ಮಿಯರು ಜೀವಿಸುತ್ತಿದ್ದಾರೆ. ಉಳ್ಳಾಲದ ಕಣಕಣದಲ್ಲಿ ಭಾರತದ ಸಂಸ್ಕೃತಿ ಜೀವಂತವಾಗಿದೆ ಎಂದರು. ಇನ್ನು Rss ಮುಖಂಡ ಪ್ರಭಾಕರ್ ಭಟ್ ಅವರಿಗೆ ವಯಸ್ಸಾಗಿರಬಹುದು. ವಯಸ್ಸಾದ ಸಂದರ್ಭದಲ್ಲಿ ಅವರು ಏನೇನು ಮಾತಾಡಿದ್ದಾರೆ. ಪ್ರಭಾಕರ ಭಟ್ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ

Edited By : Manjunath H D
Kshetra Samachara

Kshetra Samachara

03/11/2020 01:42 pm

Cinque Terre

25.32 K

Cinque Terre

8

ಸಂಬಂಧಿತ ಸುದ್ದಿ