ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಿಂದೂ ಯುವಕರ ಹತ್ಯೆ ಹೆಚ್ಚಳ: ವಿಶ್ವ ಹಿಂದೂ ಪರಿಷತ್ ಕಳವಳ

ಮಂಗಳೂರು: ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸಹಿತ ಕರಾವಳಿಯಲ್ಲಿ ಭೂಗತ ಜಗತ್ತಿನ ನಂಟು, ಗ್ಯಾಂಗ್ ವಾರ್, ಹಣಕಾಸಿನ ದಂಧೆ ಮತ್ತು ವೈಯಕ್ತಿಕ ದ್ವೇಷ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಕಿಶನ್ ಹೆಗ್ಡೆ, ಸುಳ್ಯದ ಸಂಪತ್, ಬಂಟ್ವಾಳದ ಸುರೇಂದ್ರ ಸಹಿತ 3 ಸರಣಿ ಕೊಲೆಗಳು ಮತ್ತು ಅಲ್ಲಲ್ಲಿ ಕೊಲೆ ಯತ್ನ, ಬೆದರಿಕೆ ಪ್ರಕರಣಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಮಂಗಳೂರು ಪಶ್ಚಿಮ ವಿಭಾಗದ ಪೊಲೀಸ್ ಇನ್ಸ್ ಪೆಕ್ಟರ್ ದೇವಜ್ಯೋತಿ ರೇ ಅವರಿಗೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ಲಕ್ಷ್ಮೀಪ್ರಸಾದ್ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿತು. ಈ ಮನವಿಯಲ್ಲಿ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಂಡು, ಈ ಕೃತ್ಯ ಮುಂದೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲು ಆಗ್ರಹಿಸಲಾಯಿತು.

Edited By : Nagesh Gaonkar
Kshetra Samachara

Kshetra Samachara

28/10/2020 07:19 pm

Cinque Terre

21.16 K

Cinque Terre

7