ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಡಿಕೆಶಿ ನೇತೃತ್ವದಲ್ಲಿ ಉಪಚುನಾವಣೆ ಗೆಲ್ತೀವಿ: ಜನಾರ್ದನ ಪೂಜಾರಿ ಭವಿಷ್ಯ

ಮಂಗಳೂರು: ಉಪಚುನಾವಣೆಯಲ್ಲಿ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್​​ಗೆ ಗೆಲುವು ನಿಶ್ಚಿತ. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಬಲಿಷ್ಠಗೊಂಡಿದೆ. ಶಿವಕುಮಾರ್ ಬಂದ ಬಳಿಕ ಪಕ್ಷದಲ್ಲಿ ಬದಲಾವಣೆ, ವೇಗ ಕಾಣಿಸುತ್ತಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿ ಭವಿಷ್ಯ ನುಡಿದಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು,ಉಪ ಚುನಾವಣೆಯಲ್ಲಿ ಗೆಲುವು ಸಾಧಿಸದೇ ಡಿಕೆ ಶಿವಕುಮಾರ್ ಸೋದರರು ವಿರಮಿಸಲ್ಲ. ಚುನಾವಣೆಗೆ ಖರ್ಚು ಮಾಡಲು ಸಾಧ್ಯವಿರುವ ವ್ಯಕ್ತಿ ಅಂದ್ರೆ ಡಿಕೆಶಿ. ಖರ್ಚು ಮಾಡುವಷ್ಟು ಹಣ ಡಿಕೆಶಿ ಅವರಲ್ಲಿದೆ. ಗೆಲುವು ಸಿಗುವವರೆಗೆ ಅವರು ನಿದ್ದೆ ಮಾಡಲ್ಲ. ಅವ್ರೊಂದಿಗೆ ಡಿಕೆ ಸುರೇಶ್ ಅವ್ರ ತಾಯಿ ಕೂಡ ನಿದ್ದೆ ಮಾಡಲ್ಲ ಅಂದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದ್ರೆ ಡಿಕೆಶಿ ಸಿಎಂ ಆಗ್ತಾರೆ ಅಂತಾ ಅವ್ರ ಬೆಂಬಲಿಗರು ಹೇಳ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯರ ವಿರೋಧ ಇದೆ. ಅದಕ್ಕೆ ಸಿದ್ದರಾಮಯ್ಯ ಆಸ್ಪದ ಕೊಡಲ್ಲ ಅನ್ನೋ ಮಾತಿದೆಯಲ್ಲಾ ಎಂದು ಮಾಧ್ಯಮದವ್ರು ಪೂಜಾರಿಯನ್ನ ಪ್ರಶ್ನಿಸಿದಾಗ ಸಿದ್ದರಾಮಯ್ಯ ಎಷ್ಟೇ ಪ್ರಯತ್ನಿಸಿದರೂ ಡಿಕೆ ಶಿವಕುಮಾರ್ ಗೆಲುವು ಸಾಧಿಸುತ್ತಾರೆ. ಯಾವ ಭಯವೂ ನಮಗಿಲ್ಲ , ಗೆಲುವು ನಮ್ಮದೇ ಅಂತಾ ಶಿವಕುಮಾರ್ ಪರ ಜನಾರ್ಧನ ಪೂಜಾರಿ ಬ್ಯಾಟಿಂಗ್ ಮಾಡಿದ್ರು.

Edited By : Manjunath H D
Kshetra Samachara

Kshetra Samachara

25/10/2020 10:04 am

Cinque Terre

20.12 K

Cinque Terre

2

ಸಂಬಂಧಿತ ಸುದ್ದಿ