ಮುಲ್ಕಿ: ಬಜಪೆ ಸಮೀಪದ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕಳೆದ ಕೆಲ ದಿನಗಳ ಹಿಂದೆ ಕೊಪ್ಪರಿಗೆಗೆ ಅಕ್ಕಿ ಹಾಕುವ ವಿಚಾರದಲ್ಲಿ ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರಿಗೆ ಮುಂಬೈಯಿಂದ ಬೆದರಿಕೆ ಕರೆ ಬಂದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಪರ- ವಿರೋಧ ಚರ್ಚೆ ನಡುವೆಯೂ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಮೊಕ್ತೇಸರ ನಾರಾಯಣ ಎನ್ . ಪೂಜಾರಿಯವರ ಆಹ್ವಾನದ ಮೇರೆಗೆ ಇಂದು ಮತ್ತೊಮ್ಮೆ ದೇವಸ್ಥಾನಕ್ಕೆ ಭೇಟಿ ನೀಡಿದ ಬಾವ ಅವರನ್ನು ಶ್ರೀ ಕ್ಷೇತ್ರದ ಆಡಳಿತ ಮಂಡಳಿ ವತಿಯಿಂದ ಸ್ವಾಗತಿಸಲಾಯಿತು.
ಶ್ರೀ ಕ್ಷೇತ್ರ ವತಿಯಿಂದ ಮುಂದಿನ ವರ್ಷ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಬಾವ ಅವರಿಗೆ ಈ ಸಂದರ್ಭ ಮೊಕ್ತೇಸರರು ಆಹ್ವಾನ ನೀಡಿದರು.
ದೇವಸ್ಥಾನಕ್ಕೆ ಮೊಯಿದ್ದೀನ್ ಬಾವ ವೈಯಕ್ತಿಕ ದೇಣಿಗೆ ನೀಡಿ ಮಾತನಾಡಿ, ಬೆದರಿಕೆ ಕರೆ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರಿಗೆ ದೇವರು ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸಿದರು.
Kshetra Samachara
23/10/2020 10:25 pm