ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಹಿಳೆಯರಿರುವ ಉದ್ಯಮ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ಕಡ್ಡಾಯ: ಮಹಿಳಾ ಅಯೋಗ ಅಧ್ಯಕ್ಷೆ

ಉಡುಪಿ: ದೆಹಲಿ, ಉತ್ತರ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ಯಾಮಲಾ ಕುಂದರ್ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ಕರ್ನಾಟಕದಲ್ಲಿ 2020 ವರ್ಷದಲ್ಲಿ ನಾವು 350 ಪ್ರಕರಣ ದಾಖಲಿಸಿದ್ದೇವೆ. ಇದರಲ್ಲಿ 337 ಕೇಸ್ ನಲ್ಲಿ ಕ್ರಮ ಕೈಗೊಂಡಿದ್ದೇವೆ. 13 ಕೇಸ್ ವಿಚಾರಣೆಗೆ ಬಾಕಿ ಇದೆ. 59 ಕೇಸ್ ಗಳನ್ನು ಕ್ರಮ ವಹಿಸಿ ಕ್ಲೋಸ್ ಮಾಡಿದ್ದೇವೆ.

ನಮಗೆ ಬಂದ ದೂರುಗಳಿಗೆ ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ನಮಗೆ ವರದಿ 30 ದಿನಗಳ ಒಳಗೆ ಸಲ್ಲಿಸಬೇಕು. ಈ ಸಂಪೂರ್ಣ ಪ್ರಕ್ರಿಯೆ ಆನ್ ಲೈನ್ ನಲ್ಲಿಯೇ ನಡೆಯಲಿದೆ. ಈ ಕುರಿತಾಗಿ ನಡೆಯುವ ವಿಚಾರಣೆ ಕೂಡ ಆನ್ ಲೈನ್ ನಲ್ಲಿ ನಡೆಸುತ್ತೇವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಕರಣ ಬೆಂಗಳೂರಿನಿಂದ ದಾಖಲಾಗಿವೆ.

ಉಡುಪಿಯಲ್ಲಿ 13 ಪ್ರಕರಣ ದಾಖಲಾಗಿದ್ದು ಮಂಗಳೂರಿನಲ್ಲಿ 4 ಪ್ರಕರಣ ದಾಖಲಾಗಿವೆ. ವಿದ್ಯಾರ್ಥಿನಿಯರು ಅತಿ ಹಚ್ಚು ಮಾದಕ ದ್ರವ್ಯಕ್ಕೆ ಬಲಿಯಾಗುತ್ತಿದ್ದಾರೆ.

ಇದನ್ನು ತಡೆಗಟ್ಟಲು ಎಲ್ಲ ಕಾಲೇಜುಗಳ ಬಳಿ ಇರುವ ಗೂಡಂಗಡಿ ಸೇರಿದಂತೆ ಎಲ್ಲಾ ಅಂಗಡಿಗಳನ್ನು ಸೂಕ್ತವಾಗಿ ತಪಾಸಣೆ ನಡೆಸಲು ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಣಿಪಾಲ, ಉಡುಪಿಯಲ್ಲಿ ಹಲವಾರು ರಾಜ್ಯಗಳಿಂದ ವಿದ್ಯಾರ್ಥಿನಿಯರು ಕಲಿಕೆಗಾಗಿ ಬಂದು ಇಂತಹ ವ್ಯಸನಗಳಿಗೆ ಬಲಿಯಾಗುವುದನ್ನು ನೋಡಿದ್ದೇವೆ. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ" ಎಂದರು.

ಉಡುಪಿ ಜಿಲ್ಲೆಯ ಎಲ್ಲ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ಇರುವಂತೆ ವ್ಯವಸ್ಥೆ ಮಾಡಲು ನಾನು ಸೂಚನೆ ನೀಡಿದ್ದೇನೆ. ಅತಿ ಹೆಚ್ಚು ಮಹಿಳಾ ಕಾರ್ಮಿಕರು ಇರುವ ಗಾರ್ಮೆಂಟ್, ಉದ್ಯಮ ಇಂತಹ ಕಡೆ ಆಂತರಿಕ ದೂರು ಸಮಿತಿ ಕಡ್ಡಾಯವಾಗಿ ರಚಿಸಲು ಸೂಚನೆ ನೀಡಲಾಗಿದೆ ಎಂದರು.

Edited By : Manjunath H D
Kshetra Samachara

Kshetra Samachara

23/10/2020 08:51 pm

Cinque Terre

28.17 K

Cinque Terre

1