ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 50ಕ್ಕೂ ಅಧಿಕ ದಲಿತರಿಂದ ಬೌದ್ಧ ಧರ್ಮ ಸ್ವೀಕಾರ

ಉಡುಪಿ: ಉಡುಪಿ ಜಿಲ್ಲಾ ಬೌದ್ಧ ಮಹಾಸಭಾ ವತಿಯಿಂದ ಇಂದು ಉಡುಪಿಯಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 64ನೇ ಧರ್ಮ ಚಕ್ರ ಪ್ರವರ್ತನಾ ದಿನ ಆಚರಿಸಲಾಯಿತು.

ಈ ಸಂದರ್ಭ ಸುಮಾರು 50ಕ್ಕೂ ಹೆಚ್ಚು ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.

ಮೈಸೂರಿನ ಜೀವನ ಬುದ್ಧ ವಿಹಾರ ದಿಂದ ಆಗಮಿಸಿದ ಸುಗತಪಾಲ ಭಂತೇಜಿ ಅವರು ಮತಾಂತರಗೊಂಡ ಬೌದ್ಧರಿಗೆ ಪ್ರಮಾಣವಚನ ಬೋಧಿಸಿದರು. ಮತಾಂತರಗೊಂಡ ಬೌದ್ಧರು ಕಾಯಾ ವಾಚಾ ಮನಸಾ ಪಾಲಿಸುವುದಾಗಿ ಪ್ರಮಾಣವಚನ ಸ್ವೀಕರಿಸಿದರು.

ಉಪನ್ಯಾಸಕರಾದ ಭಾಸ್ಕರ್ ವಿಟ್ಲ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ದಲಿತ ನಾಯಕ ಸುಂದರ ಮಾಸ್ತರ್, ಶ್ಯಾಮರಾಜ್ ಬಿರ್ತಿ, ನಾರಾಯಣ ಮಣೂರು, ಶೇಖರ್ ಹೆಜಮಾಡಿ, ಶೇಖರ ಹಾವಂಜೆ, ಶಂಭು ಮಾಸ್ಟರ್, ಪುಷ್ಪಾಕರ್ ಮತ್ತಿತರರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

20/10/2020 07:21 pm

Cinque Terre

10.99 K

Cinque Terre

1

ಸಂಬಂಧಿತ ಸುದ್ದಿ