ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮಾಜಿ ಶಾಸಕ ಗೋಪಾಲ ಪೂಜಾರಿ ಅವರು ಹಾಲಿ ಶಾಸಕ ಸುಕುಮಾರ ಶೆಟ್ಟಿಯವರು ಕೊರೊನಾ ಚಿಕಿತ್ಸೆಗೆ 3.60 ಲಕ್ಷ ರೂ. ವೆಚ್ಚ ಮಾಡಿದ್ದಾರೆ ಎಂದು ಸರ್ಕಾರಕ್ಕೆ ಬಿಲ್ ಕಳಿಸಿಕೊಟ್ಟಿದ್ದಾರೆ.
ಆದರೆ, ಶಾಸಕರಿಗೆ ಕೊರೊನಾ ಯಾವಾಗ ಬಂದಿದೆ? ನನಗೆ ತುಂಬಾ ಗೊಂದಲ ಆಗ್ತಾ ಇದೆ ಎಂದು ಹೇಳಿದ್ದು, ಶಾಸಕ ಸುಕುಮಾರ ಶೆಟ್ಟಿ ಸುಳ್ಳು ಹೇಳುತ್ತಿದ್ದಾರೆ ಎಂದು ಅಪಾದಿಸಿದ್ದಾರೆ.
ಆದರೆ, ಇದೀಗ ಶಾಸಕ ಸುಕುಮಾರ ಶೆಟ್ಟಿಯವರು, ಮಾಜಿ ಶಾಸಕ ಗೋಪಾಲ ಪೂಜಾರಿ ಅವರಿಗೆ ಉತ್ತರ ಕೊಟ್ಟಿದ್ದು, ನಾನು ಸರ್ಕಾರಕ್ಕೆ ಕೊರೊನಾ ಬಂದಿದೆ ಎಂದು ಬಿಲ್ ನೀಡಿಲ್ಲ. ಆದರೆ, ನನ್ನ ಕಣ್ಣುಗಳ ಆಪರೇಷನ್ ಆಗಿದ್ದ ಹಿನ್ನೆಲೆಯಲ್ಲಿ ಬಿಲ್ ಕಳಿಸಿಕೊಟ್ಟಿದ್ದೇನೆ. ಇದು ನನ್ನ ಹಕ್ಕು, ಆದ್ದರಿಂದ ಇದನ್ನು ತಿರುಚಿ ಕೊರೊನಾದ ಬಿಲ್ ಕಳುಹಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ.
Kshetra Samachara
19/10/2020 09:28 pm