ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕೋವಿಡ್ 19 ನಿಯಮಾನುಸಾರ ದಸರಾ ಸರಳ ಆಚರಣೆ: ಸಚಿವ ಕೋಟ

ಕುಂದಾಪುರ: ಕೊರೊನಾ ಹಿನ್ನೆಲೆಯಲ್ಲಿ ಮೈಸೂರು ದಸರಾ ಸೇರಿದಂತೆ ಎಲ್ಲೆಡೆ ಸರಳ ರೀತಿಯಲ್ಲಿ ದಸರಾ ಆಚರಣೆ ನಡೆಯುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪೂಜಾ ಪುನಸ್ಕಾರಗಳಿಗಷ್ಟೇ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಕುಂದಾಪುರದಲ್ಲಿ ಹೇಳಿದ್ದಾರೆ.

ಸಾಂಪ್ರದಾಯಬದ್ಧವಾಗಿ ನವರಾತ್ರಿ ನಡೆಯುವ ಧಾರ್ಮಿಕ ಕ್ಷೇತ್ರದ ಎದುರು ಹುಲಿವೇಷ ಸ್ಪರ್ಧೆ ಬದಲು ಪ್ರದರ್ಶನಕ್ಕೆ ಒಂದು ಅವಕಾಶ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಯವರಿಗೆ ಮನವಿ ಬಂದಿರುವ ಹಿನ್ನೆಲೆಯಲ್ಲಿ ಸೀಮಿತ ಸಂಖ್ಯೆ ಹುಲಿಗಳನ್ನು ಒಂದು ಅವಧಿಯ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗುವುದು. ಕೆಲವೆಡೆ ಅವಕಾಶ ಕೊಡಲಾಗಿದೆ.

ಯಾವ ವೇಷ ಧರಿಸಬೇಕೆಂಬ ನಿಯಮವಿಲ್ಲ.

ಆದರೆ, ಸಾಮಾಜಿಕ ಅಂತರದ ಜೊತೆಗೆ ಕೋವಿಡ್ ನಿಯಮ ಪಾಲಿಸಬೇಕೆಂದರು. ಎರಡು ಸಾವಿರಕ್ಕೂ ಹೆಚ್ಚಿನ ಕಲಾವಿದರು ಯಕ್ಷಗಾನ ಮೇಳಗಳಿದ್ದು, ಹೊಸ ಮೇಳ ರಚನೆ ಪ್ರಸ್ತಾಪವಿದೆ. ಕಟ್ಟಕಡೆಯ ಕಲಾವಿದನೂ ನಿರುದ್ಯೋಗಿಯಾಗಬಾರದು

ಎಂಬುದು ಸರ್ಕಾರದ ಇಚ್ಛೆ. ಹಾಗಾಗಿ ಅಂತಹ ವಾತಾವರಣ ನಿರ್ಮಾಣ ಮಾಡಲಾಗುವುದು.

ಯಕ್ಷಗಾನ ಕಲಾವಿದರಿಗೆ ಕೋವಿಡ್ ಪರೀಕ್ಷೆ ಮಾಡಿಸಬೇಕು. ಸೀಮಿತ ಪ್ರೇಕ್ಷಕರ ಉಪಸ್ಥಿತಿಯಲ್ಲಿ ಪ್ರದರ್ಶನಕ್ಕೆ ಅವಕಾಶ

ಕಲ್ಪಿಸುವುದು. ಜೊತೆಗೆ ಇಡೀ ರಾತ್ರಿ ನಡೆಯುವ ಮೇಳಗಳಿಗೆ ಸರ್ಕಾರದಿಂದ ನೆರವು ನೀಡುವ ಬಗ್ಗೆಯೂ ಚರ್ಚೆಯಾಗಬೇಕಿದೆ. ಬಳಿಕವಷ್ಟೇ ಕೋವಿಡ್ ವ್ಯಾಪ್ತಿಯೊಳಗೆ ಕಾರ್ಯಕ್ರಮ ಅಳವಡಿಸಿ ಕೊಳ್ಳಲಾಗುವುದು. ಕಲಾವಿದರಿಗೆ ಪಿಎಫ್, ಪಿಂಚಣಿ ಬಗ್ಗೆಯೂ ಆರ್ಥಿಕ ಹೊಡೆತದಿಂದ ನನೆಗುದಿಗೆ ಬಿದ್ದಿದ್ದು, ಈ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

16/10/2020 05:33 pm

Cinque Terre

12.63 K

Cinque Terre

1

ಸಂಬಂಧಿತ ಸುದ್ದಿ