ಉಡುಪಿ: ಬನ್ನಂಜೆಯಲ್ಲಿರುವ ಸರ್ಕ್ಯೂಟ್ ಹೌಸ್‌ನಲ್ಲಿ ಇಂದು ಇಸ್ಕಾನ್ ವತಿಯಿಂದ ಕೊರೊನಾ ವಾರಿಯರ್ಸ್ ಗೆ ಆಹಾರ ಕಿಟ್ ವಿತರಣೆ ನಡೆಯಿತು.
ಕಿಟ್ ವಿತರಿಸಿ ಇಸ್ಕಾನ್ ಕಾರ್ಯದರ್ಶಿ ಸನಂದನಾ ದಾಸ ಸ್ವಾಮೀಜಿ ಮಾತನಾಡಿ, ಕೊರೊನಾ ಯೋಧರನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭ ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್ ಮಾತನಾಡಿ, "ಸೇವೆಯ ಸಮಯದಲ್ಲಿ ಅನೇಕ ಆರೋಗ್ಯ ಯೋಧರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ನಾನಾ ಕಷ್ಟ ಅನುಭವಿಸಿದ್ದಾರೆ. ಕೆಲವು ನರ್ಸ್ ಗಳು ಚೇತರಿಸಿಕೊಂಡು ಹೆದರದೆ ಮತ್ತೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಹಿಂದೆ ಸರ್ಕಾರ ಕೋವಿಡ್ ನಿರ್ವಹಣೆಗಾಗಿ 45 ಸಿಬ್ಬಂದಿಗಳನ್ನು ನೇಮಕ ಮಾಡಿತ್ತು. ಇತ್ತೀಚೆಗೆ ಸರ್ಕಾರವು ಎರಡು ತಾಲೂಕು ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ 29 ಸಿಬ್ಬಂದಿ, ದಾದಿಯರನ್ನು ಮತ್ತು ಗುಂಪು ಡಿ ಸಿಬ್ಬಂದಿಗಳನ್ನು ನೇಮಿಸಿದೆ. ಆರೋಗ್ಯ ಯೋಧರು ಕೋವಿಡ್ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ ಎಂದು ಜಿಲ್ಲಾ ಸರ್ಜನ್ ಹೇಳಿದರು.
ಇಂದು ಸುಮಾರು 300 ಕೊರೊನಾ ವಾರಿಯರ್ಸ್ ಗೆ ಆಹಾರ ಕಿಟ್ ವಿತರಿಸಲಾಯಿತು. ರಶ್ಮಿ ಭಟ್, ಹರೀಶ್, ಸು ಬ್ರಾಯ ಆಚಾರ್ಯ, ವಾಸುದೇವ ಭಟ್, ರಾಧ ದಾಸ್ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಉಪಸ್ಥಿತರಿದ್ದರು.
Kshetra Samachara
14/10/2020 05:49 pm