ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಂಕಷ್ಟಕ್ಕೊಳಗಾಗಿರುವ ಮದ್ಯ ಮಾರಾಟಗಾರರ ಕೈ ಹಿಡಿಯಿರಿ: ವೈನ್ ಮರ್ಚೆಂಟ್ ಫೆಡರೇಷನ್

ಉಡುಪಿ: ಸರಕಾರ ಮದ್ಯ ಮಾರಾಟಗಾರರ ಪರವಾಗಿ ನಿರ್ಧಾರ ತೆಗೆದುಕೊಳ್ಳುವುದನ್ನು ಬಿಟ್ಟು ಮಾರಾಟಗಾರರ ವಿರುದ್ಧ ತೀರ್ಮಾನ ತೆಗೆದುಕೊಳ್ಳುತ್ತಿದೆ ಎಂದು ಫೆಡರೇಶನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಶನ್ ಆರೋಪಿಸಿದೆ.

ಈ ಬಗ್ಗೆ ಮಾತನಾಡಿರುವ ಅಸೋಸಿಯೇಶನ್ ಮುಖಂಡ ಗೋವಿಂದರಾಜ್ ಹೆಗ್ಡೆ , ಸರಕಾರ ಆನ್ ಲೈನ್ ಮೂಲಕ ಮದ್ಯ ಮಾರಾಟ ಮಾಡಲಾಗುವುದು ಎಂದು ಹೇಳಿದೆ. ಕೊರೊನಾ ಲಾಕ್ ಡೌನ್ ನಲ್ಲಿ ತೊಂದರೆ ಗೊಳಗಾದ ಮದ್ಯ ಮಾರಾಟಗಾರರಿಗೆ ಇದರಿಂದ‌ ಮತ್ತಷ್ಟು ಹೊಡೆತ ಬೀಳುತ್ತಿದ್ದು, ಸರಕಾರ ತಕ್ಷಣ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಐದು ಸಾವಿರ ಮೇಲ್ಪಟ್ಟ ಜನಸಂಖ್ಯೆ ಇರುವ ಗ್ರಾಮಗಳ ಮೂಲಕ ಹಾದು ಹೋಗುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಇಕ್ಕೆಲದಲ್ಲಿ ಸನ್ನದು ಪ್ರಾರಂಭಿಸಲು ನೀಡಿದ ಅನುಮತಿ ಸರಕಾರ ಹಿಂಪಡೆಯಬೇಕು, ಹೊಸ ಎಂಎಸ್ ಐಎಲ್ ತೆರೆಯಲು ನೀಡಿದ ಅನುಮತಿ ತಕ್ಷಣ ತಡೆಹಿಡಿಯಬೇಕು,ಲಾಕ್ ಡೌನ್ ಸಂದರ್ಭ ಸನ್ನದುದಾರರಿಗೆ ಆದ ನಷ್ಟ ಪರಿಹಾರ ನೀಡಬೇಕು, ಅಬಕಾರಿ ಅಧಿಕಾರಿಗಳು ಮದ್ಯ ಮಾರಾಟಗಾರರಿಂದ ಲಂಚ ಮತ್ತು ಮಾಮೂಲಿ ಹಣಕ್ಕಾಗಿ ಬೇಡಿಕೆ ಇಡುವುದನ್ನು ಸರಕಾರ ತಕ್ಷಣ ನಿಲ್ಲಿಸಬೇಕು.

ಈ ಸಂಬಂಧ ಈಗಾಗಲೇ ಫೆಡರೇಶನ್ ಪದಾಧಿಕಾರಿಗಳು ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೂ ಸರಕಾರ ಈ ಬಗ್ಗೆ ಸೂಕ್ತ ಸ್ಪಂದನೆ ನೀಡಿಲ್ಲ.ಮೇಲಿನ ಬೇಡಿಕೆಗಳನ್ನು ಈಡೇರಿಸುವ ಮೂಲಕ ಈಗಾಗಲೇ ಸಂಕಷ್ಟದಲ್ಲಿರುವ ಮದ್ಯ ಮಾರಾಟಗಾರರ ಕೈ ಹಿಡಿಯಬೇಕು ಎಂದು ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಆಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

14/10/2020 05:47 pm

Cinque Terre

14.7 K

Cinque Terre

4

ಸಂಬಂಧಿತ ಸುದ್ದಿ