ಬೆಂಗಳೂರಿನ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಾಯಕಿಯರು ಕಿಡಿಕಾರಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಮತ್ತು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು, ಕಾಂಗ್ರೆಸ್ ಅಭ್ಯರ್ಥಿಯಾದ ಕುಸುಮಾ ತನ್ನ ದಿವಂಗತ ಪತಿಯ ಹೆಸರಿನಲ್ಲಿ ಮತ ಯಾಚಿಸಬಾರದು ಎಂದು ಸಂಸದೆ ಹೇಳಿರುವುದು ಅಕ್ಷಮ್ಯ.
ಅವರ ಈ ಹೇಳಿಕೆಯು ಭಾರತೀಯ ಸಂಸ್ಕೃತಿಗೆ ತದ್ವಿರುದ್ಧವಾಗಿದೆ. ಸಪ್ತಪದಿ ತುಳಿದವರಿಗೆ ಮಾತ್ರ ಪತಿಯ ಮಹತ್ವ ಗೊತ್ತಿರುತ್ತದೆ ಎಂದರು. ತನ್ನ ಕ್ಷೇತ್ರದ ಜಿಲ್ಲೆಯ, ರಾಜ್ಯದ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಮಾತನಾಡದ ಶೋಭಾ ಕರಂದ್ಲಾಜೆ ಕೇವಲ ಭಾವನಾತ್ಮಕ ವಿಚಾರಗಳಿಗೆ ಮಾತ್ರ ಪ್ರತಿಕ್ರಿಯೆ ನೀಡುವ ಮೂಲಕ ರಾಜಕಾರಣ ಮಾಡುತ್ತಾರೆ. ಜಾತಿ ಧರ್ಮದ ಹೆಸರಲ್ಲಿ ರಾಜಕೀಯ ಮಾಡೋದು ಯಾರಿಗೂ ಶೋಭೆಯಾಗದು ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
13/10/2020 06:22 pm