ಪಡುಬಿದ್ರಿ: ಕಾಂಗ್ರೆಸಿಗರು ಹತ್ರಾಸ್ ಘಟನೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಬಳ್ಳಾರಿಯಲ್ಲಿ ನಾನೇ ಕಾಂಗ್ರೆಸ್ ಶಾಸಕರಿಂದ ಕಿರುಕುಳ ಅನುಭವಿಸಿ ಕೆಲಸದಿಂದಲೇ ಹೊರ ನಡೆದಾಗ, ಆದೇ ಕಾಂಗ್ರೆಸ್ ಸರಕಾರ ಇತ್ತು. ಆವಾಗ ಕಾಂಗ್ರೆಸಿಗರು ನ್ಯಾಯ ಕೊಟ್ಟಿದ್ದಾರೆಯೇ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಪ್ರಶ್ನಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಹತ್ರಾಸ್‍ನಲ್ಲಿ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ. ಅದನ್ನು ಎಲ್ಲರೂ ಪ್ರತಿಭಟಿಸಲೇಬೇಕು. ಯಾರೇ ತಪ್ಪು ಮಾಡಿದರೂ, ಅವರಿಗೆ ಶಿಕ್ಷೆ ಆಗಲೇಬೇಕು. ಹತ್ರಾಸ್ ಘಟನೆಯಲ್ಲಿ ಪೊಲೀಸರು ಹೆಚ್ಚು ತಪ್ಪೆಸಗಿದ್ದಾರೆ. ಅವರು ಸರಕಾರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಮೃತದೇಹ ಸುಟ್ಟು ಹಾಕಿದ್ದು ತಪ್ಪು.
ಪೋಸ್ಟ್ ಮಾರ್ಟಂ ಮಾಡುವಾಗ ವೀಡಿಯೊ ಚಿತ್ರೀಕರಣ ಅವಶ್ಯ. ಇದು ನ್ಯಾಯಾಲಯದಲ್ಲಿ ಶಿಕ್ಷೆ ನೀಡುವಾಗ ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ. ಆದರೆ, ಇಲ್ಲಿ ಎಲ್ಲಿಯೂ ಪೋಸ್ಟ್ ಮಾರ್ಟಂ ಮಾಡುವಾಗ ವೀಡಿಯೊ ಚಿತ್ರೀಕರಣ ಮಾಡಿಲ್ಲ.
ಪೊಲೀಸರು ಯಾವುದೇ ಪ್ರಕರಣ ಬಹಳ ಮುನ್ನೆಚ್ಚರಿಕೆಯಿಂದ ಕಾನೂನನ್ನು ಕೈಗೆ ಎತ್ತಿಕೊಳ್ಳದೆ ಕೆಲಸ ಮಾಡಿದಾಗ ಅವರಿಗೂ, ಜನರಿಗೂ ಕ್ಷೇಮ ಎಂದರು.
ಮುಂದೆ ಬಿಜೆಪಿಗೆ ಸೇರಲಿದ್ದೀರಾ ಎಂಬ ಪ್ರಶ್ನೆಗೆ, ಆ ಬಗ್ಗೆ ಯೋಚನೆ ಮಾಡಿಲ್ಲ. ಈಗ ತಮ್ಮದೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ವಕೀಲ ವೃತ್ತಿ ಮಾಡುವ ಯೋಚನೆ ಇದೆ ಎಂದರು.
Kshetra Samachara
12/10/2020 10:29 pm