ಮುಲ್ಕಿ: ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರಕಾರ 'ಹರ್ ಘರ್ ತಿರಂಗಾ' ಯೋಜನೆ ಪೂರಕವಾಗಿ ಕಿನ್ನಿಗೋಳಿಯ ಸ್ತ್ರೀ ಶಕ್ತಿ ಸಂಘಟನೆಗಳು ಬಾವುಟ ತಯಾರಿಕೆಯಲ್ಲಿ ತೊಡಗಿಕೊಂಡಿದೆ.
ಈ ಬಾರಿ ಬಟ್ಟೆ ಬಾವುಟಕ್ಕೆ ಅತ್ಯಂತ ಹೆಚ್ಚು ಮಾರುಕಟ್ಟೆ ಇದ್ದು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಅಡಿಯಲ್ಲಿ ನಂದಿನಿ ಸಂಜೀವಿನಿ ಒಕ್ಕೂಟದ ಸ್ತ್ರೀ ಲಕ್ಷೀ, ಬಾರ್ಗವಿ, ದುರ್ಗಾ ಮತ್ತು ಭೂಮಿ ಸಂಜೀವಿನಿ ಒಕ್ಕೂಟ, ಸ್ತ್ರೀ ಶಕ್ತಿ ಗುಂಪಿನ ಸುಮಾರು 50ಕ್ಕೂ ಹೆಚ್ಚು ಮಂದಿ ಸದಸ್ಯರು ಬಾವುಟ ತಯಾರಿಕೆಯಲ್ಲಿ ತೊಡಗಿದ್ದಾರೆ. ಮಹಿಳೆಯರು ತಯಾರಿಸಿದ ಬಾವುಟಗಳನ್ನು ಇತ್ತೀಚೆಗೆ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನಲ್ಲಿ ಮುಲ್ಕಿ ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್ ಬಿಡುಗಡೆ ಮಾಡಿದ್ದು, ಜನರಿಗೆ ರಿಯಾಯತಿ ದರದಲ್ಲಿ ಮಹಿಳಾ ಸಂಘಟನೆಗಳು ನೀಡುತ್ತಿದೆ.
ಮಂಗಳೂರಿನಿಂದ ಇದಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ತಂದು ಬೇಕಾದ ಅಳತೆಯಲ್ಲಿ ಕತ್ತರಿಸಿ ಅದನ್ನು ಹೊಲಿದು ಬಾವುಟಗಳನ್ನು ತಯಾರಿಸಲಾಗುತ್ತಿದೆ. ಸಂಘದ ಕೆಲ ಸದಸ್ಯರ ಮನೆಯಲ್ಲಿ ಹೊಲಿಗೆ ಯಂತ್ರವಿದ್ದು ಅವರು ಹೊಲಿಯುವ ಕಾಯಕದಲಿ ತೊಡಗಿದ್ದರೆ, ಬೇರೆಯವರು ಇದಕ್ಕೆ ಬೇಕಾರ ಬಟ್ಟೆಯನ್ನು ಕತ್ತರಿಸುವುದು, ಬಿದಿರಿನ ಕಡ್ಡಿ ಅಳವಡಿಸುವುದು ಹೀಗೆ ಪೂರಕವಾಗಿ ಸಹಕಾರ ನೀಡುತ್ತಿದ್ದಾರೆ. ಈ ಸಂಘಗಳು ಇದುವರೆಗೆ ಐದು ಸಾವಿರಕ್ಕೂ ಅಧಿಕ ಬಾವುಟಗಳನ್ನು ತಯಾರಿದ್ದು, ಇನ್ನೂ ಹೆಚ್ಚಿನ ಬೇಡಿಕೆಗಳು ಬರುತ್ತಿದೆ.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗದದವರಿಗೆ ಉಚಿತವಾಗಿ ರಾಷ್ಟ್ರ ಧ್ವಜ ನೀಡಲಿದ್ದು ಸಂಘಟನೆಯಿಂದಲೇ ಬಾವುಟ ಖರೀದಿಸಲಾಗುತ್ತದೆ.
Kshetra Samachara
06/08/2022 08:39 pm