ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಳಿಬೇರು: 16ನೇ ಶತಮಾನದ ಜೈನ ಶಾಸನ ಪತ್ತೆ !

ಬೈಂದೂರು: ತಾಲೂಕಿನ ಗೋಳಿಬೇರು ಪ್ರದೇಶದಲ್ಲಿ 16ನೇ ಶತಮಾನದ ಶಾಸನ ಸಿಕ್ಕಿದೆ. ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿಯ ನಿರ್ದೇಶಕರಾದ ಪ್ರೊ. ಎಸ್.ಎ.‌ ಕೃಷ್ಣಯ್ಯ ಮತ್ತು ನಿವೃತ್ತ ಶಿಕ್ಷಕರಾದ ಕೆ.‌ ಶ್ರೀಧರ ಭಟ್ ಅವರ ನೇತೃತ್ವದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜು ವಸ್ತುಸಂಗ್ರಹಾಲಯದ ನಿರ್ದೇಶಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಈ ಶಾಸನದ ಅಧ್ಯಯನ ಮಾಡಿದ್ದಾರೆ.

ತುಂಡಾದ ಈ‌ ಶಾಸನವು ಇಲ್ಲಿನ ಚೆನ್ನ ಪೂಜಾರಿ ಎಂಬುವರ ಗದ್ದೆಯಲ್ಲಿ ಕಂಡು ಬಂದಿದೆ. ಅವರು "ಯಕ್ಷ" ಎಂದು ಪೂಜಿಸಿ ಸಂರಕ್ಷಿಸಿಕೊಂಡು ಬಂದಿದ್ದರು. ಕಣ ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು 5 ಅಡಿ ಎತ್ತರ ಮತ್ತು 1.5 ಅಡಿ ಅಗಲವಿದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಶಾಸನದ ಮುಂಭಾಗದಲ್ಲಿ 33 ಸಾಲು ಹಾಗೂ ಹಿಂಭಾಗದಲ್ಲಿ 33 ಸಾಲು, ಒಟ್ಟು 66 ಸಾಲುಗಳನ್ನು ಹೊಂದಿದೆ. ಶಾಸನದ ಮೇಲ್ಭಾಗದಲ್ಲಿ ಮುಕ್ಕೊಡೆ ಮತ್ತು ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ.

Edited By : Manjunath H D
Kshetra Samachara

Kshetra Samachara

09/07/2022 04:08 pm

Cinque Terre

6.58 K

Cinque Terre

0