ಕುಂದಾಪುರ: ಶಂಕರ ಜಯಂತಿ ಪ್ರಯುಕ್ತ ಶ್ರೀ ಕುಂದೇಶ್ವರ ದೇವಸ್ಥಾನ ಕುಂದಾಪುರ ಮತ್ತು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಹಾಗೂ ವಲಯದ ಸಹಭಾಗಿತ್ವದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಸಹಕಾರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಹಾಗೂ ಜಿಲ್ಲಾಮಟ್ಟದ ಸ್ತೋತ್ರ ಕಂಠಪಾಠ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಸಭಾ ಕಾರ್ಯಕ್ರಮ ಸ್ತೋತ್ರವನ್ನು ಪಠಿಸುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಶೃಂಗೇರಿ ಮಠದ ಪ್ರಾಂತೀಯ ಧರ್ಮಾಧಿಕಾರಿ ವೇ.ಮೂ.ಲೋಕೇಶ್ ಅಡಿಗ ನಾಗಯಕ್ಷಿಪಾತ್ರಿ ಬಡಾಕೆರೆ ನಾವುಂದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಹಿತಿ ಇತಿಹಾಸ ತಜ್ಞ ಸುರಾಲು ಶ್ರೀ ದೇವಿಪ್ರಸಾದ್ ತಂತ್ರಿಗಳು ಮಾತನಾಡಿ ಶ್ರೀಜಗದ್ಗುರು ಶಂಕರಾಚಾರ್ಯರ ತತ್ವ ಸಿದ್ಧಾಂತ ಜಗತ್ತಿಗೆ ಆದರ್ಶವಾಗಿದೆ ಅವರು ನೀಡಿದ ಅನೇಕ ಗ್ರಂಥಗಳು ಮತ್ತು ತತ್ವ ಮೌಲ್ಯಗಳನ್ನು ಪ್ರತಿಯೊಬ್ಬರು ಓದಿ ಅರ್ಥೈಸಿಕೊಂಡು ಸನಾತನ ಧರ್ಮವನ್ನು ರಕ್ಷಿಸಿ ಬೆಳೆಸಿಕೊಳ್ಳಬೇಕೆಂದು ಎಂದು ಹೇಳಿದರು.
ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಎಸ್. ಪೂಜಾ ಪುತ್ರನ್ ಕುಂದಾಪುರ,ಅನ್ನಪೂರ್ಣ ಬೈಂದೂರು.ಹರ್ಷಿತ್ ,ಜಿ.ಪಿ. ಕುಂದಾಪುರ ಹಾಗೂ ರಾಕಿ ,ಯು.ಎಸ್. ಬೆಂಗಳೂರು.
18 ವರ್ಷದ ಕಿರಿಯರ ಸ್ತೋತ್ರ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ಧಾರಿಣಿ,ಅದಿತಿ ನಾವುಡ ಮತ್ತು ವಿಧಾತ್ರಿ ಜಿ ಮಯ್ಯ,ರಕ್ಷಿತಾ ಹಿರಿಯರ ವಿಭಾಗದಲ್ಲಿ ಅನ್ನಪೂರ್ಣ, ರಶ್ಮಿ ಅಡಿಗ ಅವರಿಗೆ ಪ್ರಾಂತೀಯ ಧರ್ಮಾಧಿಕಾರಿ ಶ್ರೀ.ವೇ. ಮೂ.ಲೋಕೇಶ್ ಅಡಿಗರು ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೋಟ ಮಹಾಜಗತ್ತು ಅಂಗಸಂಸ್ಥೆ ಕುಂದಾಪುರ ವಲಯದ ಅಧ್ಯಕ್ಷರಾದ ಶ್ರೀ.ಪಿ. ವೆಂಕಟರಾವ್ ಮತ್ತು ನಳಿನೀ.ವಿ.ರಾವ್ ಉಪಸ್ಥಿತರಿದ್ದರು.
Kshetra Samachara
06/05/2022 08:34 pm