ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ನಡೆಯುತ್ತಿದ್ದು ಸುಮಾರು 800 ವರ್ಷಗಳ ಇತಿಹಾಸ ಇರುವ ದೇವಸ್ಥಾನದ ಹಳೇ ಗರ್ಭಗುಡಿಯ ತೆರವು ಸಂದರ್ಭ ದಲ್ಲಿ. ದೇವರ ಗರ್ಭಗುಡಿಯ ಪಾಣಿ ಪೀಠದ ಕೆಳ ಭಾಗದಲ್ಲಿ ಸಿಕ್ಕ ಸಣ್ಣ ಪೆಟ್ಟಿಗೆಯಲ್ಲಿ ಬಂಗಾರದ ಜೋಡಿ ಮಯೂರ ವಾಹನ ಪತ್ತೆಯಾಗಿದ್ದು ಸುರಕ್ಷಿತವಾಗಿರಿಸಲಾಗಿದೆ.
ದೇವಸ್ಥಾನದಲ್ಲಿ ಎ.24 ರವಿವಾರ ಬೆಳಿಗ್ಗೆ 9.15ಕ್ಕೆ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಸುಬ್ರಹ್ಮಣ್ಯ ದೇವರ ಶಿಲಾಮಯ ಗರ್ಭಗುಡಿ, ಸುತ್ತು ಪಾಳಿಯ ಶಿಲಾನ್ಯಾಸವು ಪೇಜಾವರ ಶ್ರೀ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ವೇಮೂ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
Kshetra Samachara
21/04/2022 07:40 am