ಸುಳ್ಯ: ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ 31ನೇ ವರ್ಷದ ಯಕ್ಷೋತ್ಸವವು ಸುಳ್ಯದ ಕಲ್ಲುಗುಂಡಿ ಶಾಲಾ ವಠಾರದಲ್ಲಿ ನಡೆಯಿತು. ಯಕ್ಷೋತ್ಸವವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ರಾಜ ಸಂಸ್ಥಾನದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಹಿಸಿದ್ದರು.
ನಂತರ ಮಾತನಾಡಿದ ಅವರು ಮೈಸೂರಿನ ಅರಮನೆಗೂ ಯಕ್ಷಗಾನ ಕಲೆಗೂ ಅವಿನಾಭಾವ ಸಂಬಂಧವಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಅರಮನೆಗೆ ಯಕ್ಷಗಾನ ಕಲಾವಿದರನ್ನು ಕರೆಯಿಸಿದ್ದರು. ಮುಂದಿನ ದಸರಾ ಸಂದರ್ಭದಲ್ಲಿ ಸರಕಾರದ ಜೊತೆಗೆ ಮಾತನಾಡಿ ಅರಮನೆ ಅವರಣದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದರು. ಯಕ್ಷಗಾನ ಕಲೆಗೆ ಶ್ಯಾಮ್ ಭಟ್ ಅವರು ಅಪಾರ ಕೊಡುಗೆ ನೀಡಿದ್ದಾರೆ. ಈ ಹಿಂದೆ ಈಶ್ವರಮಂಗಲದ ಪಂಚಮುಖಿ ಆಂಜನೇಯ ಕ್ಷೇತಕ್ಕೆ ಭೇಟಿ ನೀಡಿದಾಗ ದಾರಿಯಲ್ಲಿ ಸಂಚರಿಸುವಾಗ ಸಂಪಾಜೆಯ ಈ ಪ್ರದೇಶಕ್ಕೆ ಭೇಟಿ ನೀಡಿದ್ದೆ ಎಂದು ನೆನಪಿಸಿಕೊಂಡರು. ಇದೇ ವೇಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
PublicNext
13/03/2022 04:18 pm