ಮುಲ್ಕಿ: ಉಡುಪಿ ಜಿಲ್ಲೆಯ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಷ್ಮಿ ಎಂಬುವರ ಮನೆ ನಿವೇಶನದಲ್ಲಿರುವ ಪಾಳು ಬಾವಿಗೆ ಅಕ್ರಮ ತ್ಯಾಜ್ಯ ತಂದು ಸುರಿದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮೂಲತಃ ಮುಲ್ಕಿ ಬಪ್ಪನಾಡು ನಿವಾಸಿಯಾದ ಲಕ್ಷ್ಮಿ ಎಂಬವರು ಕಾಪು ತಾಲೂಕಿನ ಬೆಳ್ಳೆಯಲ್ಲಿ ವಾಸ್ತವ್ಯವಿದ್ದು, ತಮ್ಮ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದಾದಾಗ ಲಕ್ಷ್ಮಿ ಅವರ ಪತಿ ನಿಧನ ಹೊಂದಿದ್ದರು. ಬಳಿಕ ಲಕ್ಷ್ಮಿಯವರು ತಮ್ಮ ಇಬ್ಬರು ಪುತ್ರಿಯರ ಜೊತೆ ತಾಯಿ ಮನೆಯಾದ ಮುಲ್ಕಿಯ ಬಪ್ಪನಾಡಲ್ಲಿ ಬಂದು ನೆಲೆಸಿದ್ದರು. ಆದರೆ ಕಳೆದ ದಿನದ ಹಿಂದೆ ತಮ್ಮ ನಿವೇಶನಕ್ಕೆ ತೆರಳಿದಾಗ ನಿವೇಶನದಲ್ಲಿದ್ದ ಪಾಳು ಬಾವಿಗೆ ಬೆಳ್ಳೆ ಗ್ರಾಮ ಪಂಚಾಯತ್ ಅಕ್ರಮವಾಗಿ ಹಾಕಿರುವ ತ್ಯಾಜ್ಯದ ರಾಶಿ ಕಂಡುಬಂದಿದೆ.
"ಗ್ರಾಮಸ್ಥರಿಗೆ ತ್ಯಾಜ್ಯ ವಿಲೇವಾರಿ ಬಗ್ಗೆ ನೀತಿ ಪಾಠ ಹೇಳುತ್ತಿರುವ ಪಂಚಾಯತ್ ಆಡಳಿತ ಅಕ್ರಮವಾಗಿ ತ್ಯಾಜ್ಯವನ್ನು ನಮ್ಮ ನಿವೇಶನದಲ್ಲಿ ಹಾಕಿರುವುದು ಮಾಡಿರುವುದು ದುರದೃಷ್ಟಕರವಾಗಿದೆ" ಎಂದು ಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬೆಳ್ಳೆ ಗ್ರಾಮ ಪಂಚಾಯಿತಿಗೆ ಕೂಡಲೇ ತ್ಯಾಜ್ಯವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿದ್ದರೂ ಇದುವರೆಗೂ ತೆರವು ಮಾಡಿಲ್ಲ.
ಕೂಡಲೇ ಕಾಪು ತಹಶೀಲ್ದಾರ್ ಈ ಬಗ್ಗೆ ಗಮನಹರಿಸಿ ಬೆಳ್ಳೆ ಗ್ರಾಮ ಪಂಚಾಯಿತಿಗೆ ಸೂಚನೆ ನೀಡಿ ತಮ್ಮ ನಿವೇಶನದಲ್ಲಿ ಹಾಕಿರುವ ಅಕ್ರಮ ತ್ಯಾಜ್ಯವನ್ನು ತೆರವುಗೊಳಿಸಬೇಕು ಎಂದು ಲಕ್ಷ್ಮಿ ಆಗ್ರಹಿಸಿದ್ದಾರೆ.
Kshetra Samachara
04/02/2022 04:28 pm