ಕುಂದಾಪುರ: ಯಕ್ಷಗಾನದ ಹಿರಿಯ ಕಲಾವಿದ, ಸ್ತ್ರೀ ವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ (96) ರವಿವಾರ ರಾತ್ರಿ ನಿಧನರಾದರು.ತಮ್ಮ ಕಾಲದ ಸುಪ್ರಸಿದ್ಧ ಸ್ತ್ರೀ ವೇಷಧಾರಿಯಾಗಿ ಗುರುತಿಸಿಕೊಂಡಿದ್ದ ಗೋವಿಂದ ಶೇರಿಗಾರ್, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
25 ವರ್ಷಗಳ ಕಾಲ ಮಾರಣಕಟ್ಟೆ ಮೇಳವೊಂದಲ್ಲೇ ತಿರುಗಾಟ ನಡೆಸಿದ ಶೇರಿಗಾರ್, 53 ವರ್ಷಗಳ ವೃತ್ತಿ ಬದುಕಿನಲ್ಲಿ ಮಂದಾರ್ತಿ, ಮಾರಣಕಟ್ಟೆ, ಸೌಕೂರು, ಅಮೃತೇಶ್ವರಿ, ಇಡಗುಂಜಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರಿಗೆ 2015ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ. 2004ರಲ್ಲಿ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿಗಳು ಲಭಿಸಿವೆ. ಹಿರಿಯ ಕಲಾವಿದನ ನಿಧನಕ್ಕೆ ಯಕ್ಷಗಾನ ಕಲಾರಂಗ ಸಂತಾಪ ವ್ಯಕ್ತಪಡಿಸಿದೆ.
Kshetra Samachara
24/01/2022 12:11 pm