ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ರಾಜಸ್ಥಾನ ವ್ಯಕ್ತಿಯಿಂದ ರಸ್ತೆಬದಿಯಲ್ಲಿ ಪುಕ್ಕಟೆ ಮನರಂಜನೆ!!

ಮುಲ್ಕಿ: ರಾಜಸ್ಥಾನದ ವ್ಯಕ್ತಿಯೆಂದು ಹೇಳಿಕೊಳ್ಳುತ್ತಿರುವ ಯುವಕನಿಂದ ಮುಲ್ಕಿ ಠಾಣಾ ವ್ಯಾಪ್ತಿಯ ರಸ್ತೆಬದಿಯಲ್ಲಿ ಮಾನಸಿಕ ನಂತೆ ವರ್ತಿಸಿ ಪುಕ್ಕಟೆ ಮನರಂಜನೆ ಒದಗಿಸಿ ಭೀತಿ ಹುಟ್ಟಿಸಿದ ಆತನನ್ನು ಪೊಲೀಸರು ಹಿಡಿದು ಕಾರ್ನಾಡು ಆಪತ್ಪಾಂಧವ ಆಶ್ರಮಕ್ಕೆ ಕಳುಹಿಸಿದ್ದಾರೆ.

ರಾಜಸ್ಥಾನದ ಉಧಂಪುರ ನಿವಾಸಿ ಶಂಕರ್ ಯಾನೆ ರಾಜು ಎಂದು ಹೆಸರು ಹೇಳಿಕೊಳ್ಳುತ್ತಿದ್ದ ವ್ಯಕ್ತಿ ಮಧ್ಯಾಹ್ನ ಹೊತ್ತಿನಲ್ಲಿ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಪದ್ಮನೂರು ಪ್ರಧಾನ ರಸ್ತೆಯಲ್ಲಿ ಮಲಗಿದ್ದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದ್ದಾನೆ. ಕೂಡಲೇ ಸ್ಥಳೀಯರು 108 ಆಂಬುಲೆನ್ಸ್ ಗೆ ಫೋನ್ ಮಾಡಿ ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ ಅಲ್ಲಿಂದ ಪುನಃ ತಪ್ಪಿಸಿಕೊಂಡು ಮುಲ್ಕಿಯ ಪಂಚಮಹಲ್ ರಸ್ತೆಯಲ್ಲಿ ಕಳ್ಳನಂತೆ ವರ್ತಿಸಿ ತಿರುಗಾಡುತ್ತಿರುವುದನ್ನು ಕಂಡು ಸ್ಥಳೀಯರು ಭಯಭೀತರಾಗಿ ಕೂಡಲೇ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೂಡಲೇ ಮುಲ್ಕಿ ಪೊಲೀಸರು ಎಎಸ್ ಐ ಕೃಷ್ಣಪ್ಪ ನೇತೃತ್ವದಲ್ಲಿ ನೇತೃತ್ವದಲ್ಲಿ ವಿಚಾರಣೆ ನಡೆಸಿದಾಗ ಆತ ಪೊಲೀಸರಿಗೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ಕಾರ್ಯಾಚರಣೆ ಮೂಲಕ ಆತನನ್ನು ಕಾರ್ನಾಡು ಆಪತ್ಬಾಂಧವ ಆಸಿಫ್ ರವರ ಮೂಲಕ ಆಶ್ರಮಕ್ಕೆ ಕಳುಹಿಸಿದ್ದಾರೆ.

Edited By : Shivu K
Kshetra Samachara

Kshetra Samachara

14/01/2022 07:50 am

Cinque Terre

10.45 K

Cinque Terre

1