ಪಡುಬಿದ್ರೆ: ಜಿಲ್ಲೆಯ ಅಂಗನವಾಡಿಗಳಿಗೆ ಸಂಜೀವಿನಿ ಚಿಕ್ಕಿ ಸರಬರಾಜು ಕುರಿತಂತೆ ಮಾತುಕತೆ ನಡೆಸಿ ಮಾರುಕಟ್ಟೆ ಉತ್ತೇಜಿಸಲು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.ಜಿಲ್ಲಾ ಪಂಚಾಯತ್ ಸಹಿತ ವಿವಿಧ ಸಭೆಗಳಲ್ಲಿ ಬಿಸ್ಕತ್ ಬದಲು ಚಿಕ್ಕಿ ಖರೀದಿಸಿ ಉಪಯೋಗಿಸಲು ಕ್ರಮ ವಹಿಸಲಾಗುವುದು. ಗಿರಿಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು
ಕಿಕೊಳ್ಳಲಾಗಿದ್ದು,ಗಿರಿಜನರು ಕೀಳರಿಮೆ ಬಿಟ್ಟು ಸರ್ಕಾರದ ಯೋಜನೆಗಳ ಮೂಲಕ ಸ್ವಾವಲಂಬಿ ಗಳಾಗಬೇಕು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ ನವೀನ್ ಭಟ್ ಹೇಳಿದರು.
ಉಡುಪಿ ಜಿಲ್ಲಾ ಪಂಚಾಯತ್ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ವತಿಯಿಂದ ಪಾದೆಬೆಟ್ಟಿನಲ್ಲಿ ನಿರ್ಮಿಸಿರುವ ಸಂಜೀವಿನಿ ಚಿಕ್ಕಿ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿಕ್ಕಿ ತಯಾರಿ ತರಬೇತುದಾರ ಗಣೇಶ್ ಅವರನ್ನು ಗೌರವಿಸಲಾಯಿತು.
ಶಾಸಕ ಲಾಲಾಜಿ ಆರ್ ಮೆಂಡನ್, ಪಡುಬಿದ್ರಿ ಗ್ರಾ.ಪಂ ಅಧ್ಯಕ್ಷ ರವಿ ಶೆಟ್ಟಿ ಪದ್ರ, ಅಧ್ಯಕ್ಷ ಬಾಬು ಎಂ .ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ .ಸತೀಶ್ ಬಿ .ಎಸ್ .ಕಾರ್ಯ ನಿರ್ವಹಣಾಧಿಕಾರಿ ಕಾಪು ತಾಲೂಕು ಪಂಚಾಯತ್ ,ದೂದ್ ಪೀರ್ ಯೋಜನಾ ಸಮನ್ವಯಾಧಿಕಾರಿ ಐ .ಟಿ .ಡಿ .ಪಿ .ಪಡುಬಿದ್ರಿ ಗ್ರಾಮ ಪಂಚಾಯತ್, ಸದಸ್ಯರಾದ ಅಶೋಕ್ ಪೂಜಾರಿ ,ಫಿರೋಜ್ .,ಅಬ್ದುಲ್ ಹುಸೈನ್ ,ಶೋಭಾ ,ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/12/2021 03:30 pm