ಕೋಟ: ಪಂಚವರ್ಣ ಯುವಕ ಮಂಡಲ ಕೋಟ ,ಗಿಳಿಯಾರು ಯುವಕ ಮಂಡಲ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ
ನಡೆಯುತ್ತಿದ್ದ ಸ್ವಚ್ಚತಾ ಅಭಿಯಾನಕ್ಕೆ 100 ವಾರಗಳ ಸಂಭ್ರಮ. ಈ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ ಮಣೂರಿನಿಂದ ಕೋಟದ ಮಹಾಲಿಂಗೇಶ್ವರ ದೇವಸ್ಥಾನದವರೆಗೆ 3 ಕೀ. ಮೀ ದೂರದವರೆಗೆ ಬೃಹತ್ ಸ್ವಚ್ಚತಾ ಅಭಿಯಾನದ ಕಾರ್ಯಕ್ರಮ ನಡೆಯಿತು.
ಪ್ಲಾಸ್ಟಿಕ್ ನಿರ್ಮೂಲನೆಗೆ ಪ್ರಜ್ಞಾವಂತ ಜನರ ಸಹಕಾರ ಬಹಳ ದೊಡ್ಡದು. ಮಾತ್ರವಲ್ಲ,ಆಯಾ ಭಾಗಗಳಲ್ಲಿರುವ ಪಂಚಾಯತ್ ಗಳಲ್ಲಿ ಆರಂಭವಾಗಿರುವ ಎಸ್ ಎಲ್ ಆರ್ ಎಂ ಘಟಕಗಳ ಪಾತ್ರ ಕೂಡ ಅತೀ ಮುಖ್ಯವಾಗಿರುತ್ತದೆ. ಈ ಮೂಲಕ ಸಾರ್ವಜನಿಕರಿಗೆ ಪರಿಸರದ ಜಾಗ್ರತಿ ಮೂಡಿಸುವ ಕಾರ್ಯಕ್ರಮಗಳು ಎಲ್ಲೆಡೆ ನಡೆಯುವಂತಾಗಬೇಕು ಎಂದು ಅನಂದ್ ಸಿ.ಕುಂದರ್ ಹೇಳಿದರು.
ಬಳಿಕ ಮಾತನಾಡಿದ ಪರಿಸರ ತಜ್ನರಾದ ಬಾಲಕೃಷ್ಣ ಮುದ್ದೋಡಿ ಈಗಾಗಲೇ ಹಲವಾರು ಕಾರಣಗಳಿಂದ ಪರಿಸರ ನಾಶವಾಗುತ್ತಿದ್ದು ಅದರ ಪರಿಣಾಮ ನಾವೆಲ್ಲ ಧೂಳು,ಹೊಗೆಗಳ ಪರಿಣಾಮವನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ಪರಿಸರವನ್ನು ವಿವಿಧ ಸಂಘ ಸಂಸ್ಥೆಗಳು ಉಳಿಸುವುದು ಮಾತ್ರವಲ್ಲ ,ಸಾರ್ವಜನಿಕರು ಕೂಡ ಪರಿಸರವನ್ನು ಉಳಿಸುವಲ್ಲಿ ಸಹಕರಿಸಬೇಕು ಮತ್ತು ತ್ಯಾಜ್ಯ ಮುಕ್ತ ಪರಿಸರವನ್ನಾಗಿಸಬೇಕು ಎಂದರು. ಈ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ವಿವಿಧ ಸಂಘ ಸಂಸ್ಥೆಗಳು ಮತ್ತು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು.
Kshetra Samachara
14/12/2021 04:54 pm