ಮಂಗಳೂರು: ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಶ್ವಾನ ದಳದಲ್ಲಿ ಬಾಂಬ್ ಪತ್ತೆಯಲ್ಲಿ ಮುಂಚೂಣಿಯಲ್ಲಿದ್ದ ಲ್ಯಾಬ್ರಡೋರ್ ತಳಿಯ ಶ್ವಾನ ಲೀನಾ ಅನಾರೋಗ್ಯದಿಂದ ಮೃತಪಟ್ಟಿದೆ.
2020ರ ಜನವರಿ 12ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಇರಿಸಿದ್ದ ಬಾಂಬ್ ಅನ್ನು ಪತ್ತೆ ಹಚ್ಚಿರುವ ಈ ಶ್ವಾನ ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದೆ. ವಿಮಾನ ನಿಲ್ದಾಣದ ಸಿಐಎಸ್ಎಫ್ ಶ್ವಾನದಳ ವಿಭಾಗದ 4 ಶ್ವಾನಗಳಲ್ಲಿಯೇ ಬಾಂಬ್ ಪತ್ತೆಯಲ್ಲಿ ಅತ್ಯಂತ ಚುರುಕಿನ ಶ್ವಾನವಾಗಿದ್ದ ಲೀನಾಗೆ 8 ವರ್ಷ ಒಂಬತ್ತು ತಿಂಗಳು ವಯಸ್ಸಾಗಿತ್ತು. ಕಿಡ್ನಿ ಸಂಬಂಧಿತ ರೋಗದಿಂದ ಬಳಲುತ್ತಿದ್ದ ಲೀನಾ ಫೆ.16ರಿಂದ ಆಹಾರ ಸೇವನೆ ಮಾಡದೆ ಗ್ಲೂಕೋಸ್ ಮಾತ್ರ ಸೇವಿಸುತ್ತಿತ್ತು. ಮಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿಯೇ ಲೀನಾ ಅಂತ್ಯ ಸಂಸ್ಕಾರವನ್ನು ಸಕಲ ಸೇನಾ ಗೌರವದೊಂದಿಗೆ ನೆರವೇರಿಸಲಾಯಿತು.
2013ರ ಮೇ 5ರಂದು ಜನಿಸಿದ್ದ ಲೀನಾಗೆ ರಾಂಚಿಯಲ್ಲಿ ಸ್ಫೋಟಕ ಪತ್ತೆ ಕಾರ್ಯಾಚರಣೆಯಲ್ಲಿ ತರಬೇತಿ ನೀಡಲಾಗಿತ್ತು. ಆ ಬಳಿಕ ಮಂಗಳೂರು ವಿಮಾನ ನಿಲ್ದಾಣದ ಶ್ವಾನದಳಕ್ಕೆ ನಿಯೋಜನೆಗೊಂಡಿತ್ತು. ಲೀನಾ ಅನಾರೋಗ್ಯದ ಹಿನ್ನೆಲೆಯಲ್ಲಿ ಬೇರೊಂದು ಶ್ವಾನವನ್ನು ವಿಮಾನ ನಿಲ್ದಾಣದ ಶ್ವಾನದಳ ವಿಭಾಗಕ್ಕೆ ಸೇರ್ಪಡೆಗೊಳಿಸಿ ರಾಂಚಿಯಲ್ಲಿ ತರಬೇತಿ ನೀಡಲಾಗುತ್ತಿದೆ.
Kshetra Samachara
22/11/2021 11:26 am