ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಿಲಿಕುಳ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ

ಮಂಗಳೂರು: ನಗರದ ಪಿಲಿಕುಳ ಶಿವರಾಮ ಕಾರಂತ ಜೈವಿಕ ಉದ್ಯಾನವನಕ್ಕೆ ವಿನಿಮಯದ ಮೂಲಕ ಹೊಸ ಅತಿಥಿಗಳು ಆಗಮಿಸಿದ್ದಾರೆ.

ಬರಿಂಕ, ದೊಡ್ಡ ಬೆಳ್ಳಕ್ಕಿ, ನೀರು ಹಕ್ಕಿಗಳು ಹೊಸದಾಗಿ ಇಲ್ಲಿಗೆ ಆಗಮಿಸಿವೆ. ನಾಲ್ಕು ಬರಿಂಕ, ಆರು ದೊಡ್ಡ ಬೆಳ್ಳಕ್ಕಿ ಮತ್ತು ಎರಡು ನೀರುಹಕ್ಕಿಗಳನ್ನು ತರಲಾಗಿದೆ. ಇದೀಗ ಇವು

ವೀಕ್ಷಣೆಗೆ ಲಭ್ಯ ಇವೆ. ಇವುಗಳನ್ನು ಹೈದರಾಬಾದ್ ಮೃಗಾಲಯದಿಂದ ಇಲ್ಲಿಗೆ ತರಲಾಗಿದೆ.

ಪ್ರಾಣಿ-ಪಕ್ಷಿಗಳ ವಿನಿಮಯದ ಅಂಗವಾಗಿ ಹೈದರಾಬಾದ್ ಮೃಗಾಲಯಕ್ಕೆ ಪಿಲಿಕುಳ ಜೈವಿಕ ಉದ್ಯಾನವನದಿಂದ ನಾಲ್ಕು ಕಾಡುನಾಯಿ, ನಾಲ್ಕು ಹೆಬ್ಬಾವು ಮತ್ತು ನಾಲ್ಕು ವಿಟೇಕರ್ಸ್ ಹಾವು ನೀಡಲಾಗಿದೆ.

Edited By :
Kshetra Samachara

Kshetra Samachara

13/11/2021 06:55 pm

Cinque Terre

4.12 K

Cinque Terre

0