ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧಾ ಕೂಟದಲ್ಲಿ ಪೂರ್ವಿ ಶೆಟ್ಟಿ ಗೆ ಚಿನ್ನದ ಪದಕ

ಕಟೀಲು:ಇತ್ತೀಚೆಗೆ ಮೈಸೂರ್ ನಲ್ಲಿ ನಡೆದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧಾ ಕೂಟದಲ್ಲಿ ಪೂರ್ವಿ ಶೆಟ್ಟಿ ರವರು ಲೋ ಕಿಕ್ 56 ಕೆಜಿ ಜಿ ಚಿನ್ನದ ಪದಕ ಪಡೆದಿರುತ್ತಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ದಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.

ಪೂರ್ವಿ ಶೆಟ್ಟಿ ರವರು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮಾರ್ಷಿಯಲ್ ಆರ್ಟ್ಸ್ ನ ವಿದ್ಯಾರ್ಥಿಯಾಗಿದ್ದು ಸಂಸ್ಥೆಯ ಮುಖ್ಯ ಶಿಕ್ಷಕರಾದ ನಿತಿನ್ ಎನ್ ಸುವರ್ಣ ಮತ್ತು ಶಿಕ್ಷಕರಾದ ಸಂಪತ್ ಕುಮಾರ್ ಹಾಗೂ ಸಹಾಯಕ ಶಿಕ್ಷಕ ಕಾರ್ತಿಕ್ ಆಚಾರ್ಯ ರವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

ಪೂರ್ವಿ ಶೆಟ್ಟಿ ಕಟೀಲು ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಕಿರಣ್ ಶೆಟ್ಟಿ ಕಟೀಲು ಹಾಗೂ ಪೂನಮ್ ಶೆಟ್ಟಿ ಬಜ್ಪೆ ರವರ ಪುತ್ರಿಯಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

12/11/2021 04:33 pm

Cinque Terre

2.81 K

Cinque Terre

0