ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಮುರಗೋಳಿ ಪರಿಸರದಲ್ಲಿ ಸುಮಾರು 10.44 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ಘಟಕ ನಿರ್ಮಿಸಲು ನೀಡಿದ್ದ ನಿರಾಕ್ಷೇಪಣ ಪತ್ರವನ್ನು ಗ್ರಾಮಸ್ಥರ ಆಗ್ರಹಕ್ಕೆ ಮಣಿದು ಪಂಚಾಯಿತಿ ಹಿಂಪಡೆಯಲು ಒಪ್ಪಿದೆ.
ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಘಟಕ ಕಾರ್ಯಾಚರಣೆಯಿಂದ ಗ್ರಾಮೀಣ ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಬೀರಲಿದ್ದು ಇದಕ್ಕೆ ಅನುಮತಿ ನೀಡಬಾರದು ಎಂದು ಗ್ರಾಮಸ್ಥರು ಪಂಚಾಯಿತಿ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ಮಾಡಿದ್ದರು. ಉದ್ದೇಶಿತ ಕಲ್ಲು ಗಣಿಗಾರಿಕೆಯ ಜಾಗದಲ್ಲಿ ಸಂಭಾವ್ಯ ಸಂತ್ರಸ್ತರ ಪ್ರತಿಭಟನೆ ನಡೆದ ಸಂದರ್ಭ ಪಂ. ಅಧ್ಯಕ್ಷೆ ಸಿ.ಎಸ್. ಕಲ್ಯಾಣಿ ಸಂತ್ರಸ್ತರನ್ನು ಸಂತೈಸಿ ಕಲ್ಲು ಗಣಿಗಾರಿಕೆಗೆ ನೀಡಲಾಗಿದ್ದ ನಿರಾಕ್ಷೇಪಣ ಪತ್ರವನ್ನು ಹಿಂಪಡೆದುಕೊಳ್ಳಲಾಗುವುದು ಪಂಚಾಯಿತಿಯಿಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು.
Kshetra Samachara
27/10/2021 09:15 pm