ಮುಲ್ಕಿ: ಶ್ರೀ ವೀರಭದ್ರ ವಾಚನಾಲಯ ಯುವಕ ಮಂಡಲ ಮತ್ತು ಮಹಿಳಾ ವೇದಿಕೆ ಕಲ್ಲಾಪು, ಶ್ರೀ ಚೈತನ್ಯ ವೀರಮಾರುತಿ ಮಂದಿರ ಹಾಗೂ ವ್ಯಾಯಾಮ ಶಾಲೆ ಸಂತಕಟ್ಟೆ, ಪಡುಪಣಂಬೂರು ಕ್ರಿಕೆಟರ್ಸ್ ಪಡುಪಣಂಬೂರು, ಪಡುಪಣಂಬೂರು ಗ್ರಾ.ಪಂ.ನ ಬೆಳ್ಳಾಯರು ಎರಡನೇ ವಾರ್ಡ್ ನಾಗರಿಕರ ವತಿಯಿಂದ ಕಳೆದ ಏಳು ವರ್ಷಗಳಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮಕ್ಕೆ ವರ್ಗಾವಣೆಗೊಂಡಿರುವ ಅನಿತಾ ವಿ. ಕ್ಯಾಥರೀನ್ ರವರಿಗೆ ಬೀಳ್ಕೊಡುಗೆ ಅಭಿನಂದನಾ ಸಮಾರಂಭ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಸಭಾಭವನದಲ್ಲಿ ನಡೆಯಿತು.
ಬೀಳ್ಕೊಡುಗೆ ಅಭಿನಂದನೆ ಸ್ವೀಕರಿಸಿ ಅನಿತಾ ಕ್ಯಾಥರಿನ್ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಜನರ ಸಹಕಾರ ಮುಖ್ಯವಾಗಿದ್ದು ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ, ಸರಕಾರ ಹಾಗೂ ಜನರ ಕೊಂಡಿಯಾಗಿದ್ದುಕೊಂಡು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಅನಿತಾ ಕ್ಯಾಥರಿನ್ ಪ್ರಾಮಾಣಿಕತೆ ಸಜ್ಜನಿಕೆ ಹಾಗೂ ಸರಳತೆಯ ಮೂಲಕ ಗ್ರಾಮೀಣ ಜನರ ಪ್ರೀತಿ ಪಾತ್ರರಾಗಿದ್ದರು. ನಿಷ್ಠೆ ಪ್ರಾಮಾಣಿಕತೆ ಹಾಗೂ ಸಾಧನೆ ಮಾಡಿದರೆ ಜನ ಗುರುತಿಸ್ತಾರೆ ಎಂಬುದಕ್ಕೆ ಕಾರ್ಯಕ್ರಮವೇ ಸಾಕ್ಷಿ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದೇವಸ್ಥಾನದ ಗುರಿಕಾರ ರಾದ ರತ್ನಾಕರ ಶೆಟ್ಟಿಗಾರ, ದ.ಕ ಜಿ.ಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಹಳೆಯಂಗಡಿ ಗ್ರಾ.ಪಂ ಅಧ್ಯಕ್ಷೆ ಪೂರ್ಣಿಮಾ, ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಆಳ್ವ ಪಡುಪಣಂಬೂರು ಗ್ರಾಪಂ ಉಪಾಧ್ಯಕ್ಷೆ ಕುಸುಮ ಚಂದ್ರಶೇಖರ್, ಸದಸ್ಯರಾದ ಉಮೇಶ್ ಪೂಜಾರಿ, ಹರಿಪ್ರಸಾದ್, ಪಡುಪಣಂಬೂರು ಕ್ರಿಕೆಟರ್ಸ್ ನ ಶಶಾಂಕ್ ಆಚಾರ್ಯ, ಮುಲ್ಕಿ ಅರಮನೆಯ ಗೌತಮ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
03/10/2021 06:33 pm