ಉಪ್ಪಿನಂಗಡಿ: ಇಲ್ಲಿನ 34ನೇ ನೆಕ್ಕಿಲಾಡಿಯ ಕೊಡಿಪ್ಪಾಡಿ ಮನೆ ನಿವಾಸಿಯೋರ್ವ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಸೋಮವಾರ ರಾತ್ರಿ ಹೃದಯಾಘಾತಕ್ಕೀಡಾಗಿ ನಿಧನರಾಗಿದ್ದಾರೆ.
ಇಸ್ಮಾಯಿಲ್ ಕೊಡಿಪ್ಪಾಡಿ (48) ಮೃತ ವ್ಯಕ್ತಿ. ರಿಯಾದ್‌ನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಇಸ್ಮಾಯಿಲ್ ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪತ್ನಿ ಹಾಗೂ ತಾಯಿಯ ಒಪ್ಪಿಗೆ ಮೇರೆಗೆ ಮೃತರ ಅಂತ್ಯಕ್ರಿಯೆಯನ್ನು ರಿಯಾದ್‌ನಲ್ಲಿಯೇ ನಡೆಸಲಾಗುವುದೆಂದು ತಿಳಿದು ಬಂದಿದೆ.
Kshetra Samachara
08/09/2021 07:58 am