ಬಜಪೆ: ಗಾಯಗೊಂಡ ಸ್ಥಿತಿಯಲ್ಲಿದ್ದ ರಾಷ್ಟ ಪಕ್ಷಿ ನವಿಲನ್ನು ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರೊಬ್ಬರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಪೆರ್ಮುದೆ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ಲಯನ್ ದೀಪಕ್ ಪೆರ್ಮುದೆ ಅವರ ತೋಟದ ಮನೆ ಮುಂಚೂರು ಕೊಡಿಪಾಡಿಯಲ್ಲಿ ನವಿಲು ಕಾಲಿಗೆ ಏಟು ಮಾಡಿಕೊಂಡು ನಡೆದಾಡದ ಸ್ಥಿತಿಯಲ್ಲಿ ಮನೆಯ ಸಮೀಪ ಬಿದ್ದಿತ್ತು. ಇದನ್ನು ಕಂಡ ಅವರು ಅರಣ್ಯ ಅಧಿಕಾರಿಗೆ ಮಾಹಿತಿಯನ್ನು ನೀಡಿ ಅನುಮತಿಯ ಮೇರೆಗೆ ಮಂಗಳೂರಿನ ಹೊಯ್ಗೆ ಬಜಾರ್‌ನಲ್ಲಿನ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ಒಪ್ಪಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಲಿಯೋ ರುಷಿಕ್ ಡಿ ಪೆರ್ಮುದೆ, ದೀಪಕ್ ಪೆರ್ಮುದೆ, ನಿಧಿ ಶೆಟ್ಟಿಗಾರ್, ಸುನೀಲ್ ಬಜಿಲಕೇರಿ ಜತೆಗಿದ್ದರು.
Kshetra Samachara
21/08/2021 01:21 pm