ಮುಲ್ಕಿ: ಯಕ್ಷಗಾನ ಕಲಾವಿದ ಅಭಿನವ ವಾಲ್ಮೀಕಿ ದೇರಳಕಟ್ಟೆ ಮಂಜನಾಡಿ ಬಳಿಯ ಬೊಟ್ಟಿಕೆರೆ ಪುರುಷೊತ್ತಮ ಪೂಂಜ(65) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕಳೆದ 25ಕ್ಕೂ ಹೆಚ್ಚು ದಶಕಗಳಿಂದ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಭಾಗವತರಾಗಿ, ವಿವಿಧ ರಂಗ ಕಲಾವಿದರಾಗಿ, ವೇಷದಾರಿಯಾಗಿ, ಚೆಂಡೆ ಮದ್ದಳೆ ವಾದಕರಾಗಿ ಸೇವೆ ಸಲ್ಲಿಸಿದ್ದರು.
ಎಳವೆಯಲ್ಲಿ ಯಕ್ಷಗಾನ ಪ್ರಿಯರಾಗಿದ್ದ ಅವರು ಬಳಿಕ ಸಾಹಿತ್ಯ, ಪುರಾಣ, ಛಂದಸ್ಸು, ಭಾಷಾ ಶುದ್ದಿಯಲ್ಲಿ ಪ್ರತಿಭಾವಂತರಾಗಿದ್ದರು. ಅವರ ನಳಿನಾಕ್ಷ ನಂದನ, ಮಾನಿಷಾದ, ಲೋಕಾಭಿರಾಮ, ಕಲಿ ಕೀಚಕ, ಸತಿ ಉಲೂಪಿ, ಗಂಡುಗಲಿ ಘಟೋತ್ಕಚ ದಂತಹ ಪ್ರಸಂಗಗಳು ಹೆಸರುವಾಸಿಯಾಗಿದ್ದು ಮೇಘ ಮಯೂರಿಯಂತಹ ಚಾರಿತ್ರಿಕ ಪ್ರಸಂಗ ಮನೆ ಮಾತಾಗಿದೆ.
ಮುಂಬೈನಲ್ಲಿ ಯಕ್ಷಗಾನ ತರಬೇತಿ ನೀಡುತ್ತಿದ್ದ ಅವರಿಗೆ ಅನೇಕ ಅಭಿಮಾನಿಗಳಿದ್ದರು. ಅವರು ಉಪ್ಪಳ ಭಗವತಿ ಮೇಳ, ಪುತ್ತೂರು ಯಕ್ಷಗಾನ ಮೇಳ, ಕರ್ನಾಟಕ ಮೇಳದಲ್ಲಿ ಸೇವೆ ಸಲ್ಲಿಸಿದ್ದರು.
Kshetra Samachara
15/08/2021 09:27 am