ಬೈಂದೂರು: ಸಿಐಟಿಯು ರಾಜ್ಯ ಸಮಿತಿಯ ನೇತೃತ್ವದಲ್ಲಿ ಕಾಮಿ೯ಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬಜೆಟ್ ಪೂವ೯ ಮಾಚ್೯4 ರಂದು ಜರುಗುವ ಕಾಮಿ೯ಕರ ವಿಧಾನ ಸೌಧ ಚಲೋ ಹೋರಾಟ ಕಾಯ೯ಕ್ರಮದ ಅಂಗವಾಗಿ ಇಂದು ಬೈಂದೂರು ತಾಲೂಕು ಸಿಐಟಿಯು ನೇತೃತ್ವದಲ್ಲಿ ಕಾಮಿ೯ಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ,ಕಾಮಿ೯ಕರ ಬೃಹತ್ ಮೆರವಣಿಗೆಯ ಮೂಲಕ
ಬೈಂದೂರು ಶಾಸಕರ ಕಚೇರಿ ಚಲೋ ಹೋರಾಟ ಕಾಯ೯ಕ್ರಮ ಜರುಗಿತು.ಬೈಂದೂರು ಸಿಐಟಿಯು ಕಚೇರಿಯಿಂದ ಕಾಮಿ೯ಕರ ಪಾದಯಾತ್ರೆಯನ್ನು ಉದ್ಘಾಟಿಸಿದ ಸಿಐಟಿಯು ಉಡುಪಿ ಜಿಲ್ಲಾ ಕಾಯ೯ದಶಿ೯ ಸುರೇಶ್ ಕಲ್ಲಾಗರ್ ಮಾತನಾಡುತ್ತಾ,ಮಾಚ್೯ 4 ರಂದು ಎಲ್ಲಾ ವಿಭಾಗದ ಕಾಮಿ೯ಕರು
ಬಜೆಟ್ ಅಧಿವೇಶನ ಚಲೋ ನಡೆಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ,ಈ ವಷ೯ದ ಬಜೆಟ್ ಅನುದಾನದ ಮೂಲಕ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.ಬೈಂದೂರು ತಾಲೂಕು ಕೇಂದ್ರಕ್ಕೆ ಮಿನಿ ವಿಧಾನ ಸೌಧ,ಕಾಮಿ೯ಕ ನಿರೀಕ್ಷಕರ ಕಚೇರಿ, ಬೈಂದೂರು ತಾಲೂಕಿನಾದ್ಯಂತ ನದಿಗಳಲ್ಲಿ ಮರಳು ತೆಗೆಯಲು ಪರವಾನಿಗೆ ನೀಡಬೇಕು.
ಸರಕಾರದ ಎಲ್ಲಾ 24 ಇಲಾಖೆಗಳನ್ನು ತೆರೆಯಬೇಕು,ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ಮೇಲ್ದಜೆ೯ಗೆ ಏರಿಸುವುದು,ಸ್ಕೀಮ್ ನೌಕರರಾದ ಅಕ್ಷರ ದಾಸೋಹ,ಅಂಗನವಾಡಿ,ಆಶಾ,ಪಂಚಾಯತ್ ನೌಕರರರಿಗೆ ವೇತನ ಹೆಚ್ಚಳ,ಕಟ್ಟಡ ಕಾಮಿ೯ಕರಿಗೆ ಕೊರೊನಾ ಪರಿಹಾರ,ಮದುವೆ,ಪಿಂಚಣಿ,ಮರಣ ಪರಿಹಾರಕ್ಕೆ ಅಜಿ೯ ಹಾಕುವ ಕಾಲ ಮಿತಿ ರದ್ಧತಿಗೆ,ಮನೆ ಕಟ್ಟಲು ರೂಪಾಯಿ 3 ಲಕ್ಷ ಸಹಾಯಧನ ಕೊಡಬೇಕು,ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತವಾಗಿ ಸಂಪೂಣ೯ಗೊಳಿಸಬೇಕು ಇತ್ಯಾದಿ ಸ್ಥಳೀಯ ಬೇಡಿಕೆ ಸಹಿತ ರಾಜ್ಯ ಮಟ್ಟದ 30 ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಶಾಸಕರ ಅನುಪಸ್ಥಿತಿಯಲ್ಲಿ,ಉಪಸ್ಥಿತರಿದ್ದ ಶಾಸಕರ ಆಪ್ತ ಸಹಾಯಕ ಮಹಿಮ್ ಶೆಟ್ಟಿಯವರಿಗೆ ಹಸ್ತಾಂತರಿಸಲಾಯಿತು.
Kshetra Samachara
25/02/2021 09:12 am