ಮಂಗಳೂರು: ನಗರದ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ಹಿಂದೂ ಸಭಾವು ಲೇಡಿಹಿಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಶಂಖನಾದದೊಂದಿಗೆ ಅಖಿಲ ಭಾರತ ಹಿಂದೂ ಸಭಾದ ರಾಜ್ಯ ಸಂಸದೀಯ ಕಾರ್ಯದರ್ಶಿ ಪ್ರತಿಭಟನೆಗೆ ಚಾಲನೆ ನೀಡಿ, ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಲಭಿಸಿದ್ದರೂ, ಇನ್ನೂ ಕೆಲವೊಂದು ಕಡೆಗಳಲ್ಲಿ ಬ್ರಿಟಿಷರ ನೆರಳಿನ ಛಾಯೆ ಹಾಗೆಯೇ ಉಳಿದುಕೊಂಡಿದೆ. ಅದನ್ನು ಕಿತ್ತೊಗೆಯುವವರೆಗೆ ಅಖಿಲ ಭಾರತ ಹಿಂದೂ ಮಹಾಸಭಾ ವಿಶ್ರಮಿಸುವುದಿಲ್ಲ.
ಆದ್ದರಿಂದ ಲೇಡಿಹಿಲ್ ವೃತ್ತವನ್ನು ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ಮರುನಾಮಕರಣಗೊಳಿಸುವ ಮೂಲಕ ದೇಶದ ಹಲವು ಕಡೆಗಳಲ್ಲಿ ಸಾಧುಸಂತರ ಹೆಸರನ್ನು ಮರುನಾಮಕರಣ ಮಾಡುವ ಕೈಂಕರ್ಯದಲ್ಲಿ ತೊಡಗಲಾಗುತ್ತದೆ ಎಂದು ಧರ್ಮೇಂದ್ರ ಹೇಳಿದರು.
Kshetra Samachara
26/01/2021 12:31 pm